ADVERTISEMENT

ಭೂಪಟದಲ್ಲಿ ಇಲ್ಲ ಪಿಒಕೆ: ಪಠ್ಯಪುಸ್ತಕ ರದ್ದುಗೊಳಿಸಿದ ಪಾಕಿಸ್ತಾನ

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 14:54 IST
Last Updated 24 ಜುಲೈ 2020, 14:54 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಲಾಹೋರ್‌: ಪಾಕ್‌ ಆಕ್ರಮಿತ ಕಾಶ್ಮೀರವನ್ನು ದೇಶದ ಭೂಪ್ರದೇಶ ಎಂದು ನಮೂದಿಸಿ‍ಲ್ಲದ 100ಕ್ಕೂ ಹೆಚ್ಚು ಪಠ್ಯಪುಸ್ತಕಗಳನ್ನುಪಾಕಿಸ್ತಾನದ ಪಂಜಾಬ್‌ ಸರ್ಕಾರ ರದ್ದುಗೊಳಿಸಿದೆ.

ಪಾಕಿಸ್ತಾನ ಸ್ಥಾಪಕ ಮೊಹಮ್ಮದ್ ಆಲಿ ಜಿನ್ನಾ ಮತ್ತು ರಾಷ್ಟ್ರಕವಿ ಮೊಹಮ್ಮದ್‌ ಇಕ್ಬಾಲ್‌ ಅವರ ಜನ್ಮ ದಿನಾಂಕಪಠ್ಯಪುಸ್ತಕಗಳಲ್ಲಿ ತಪ್ಪಾಗಿ ಪ್ರಕಟಿಸಲಾಗಿದೆ. ಅಲ್ಲದೆ, ಜಿನ್ನಾ ಅವರ ‘ದ್ವಿರಾಷ್ಟ್ರ ಸಿದ್ಧಾಂತ’ವನ್ನು ಖಂಡಿಸುವ ಸಾಲುಗಳು ಇವೆ ಎಂದು ಪಂಜಾಬ್‌ ಪಠ್ಯಪುಸ್ತಕ ಬೋರ್ಡ್‌ನ ವ್ಯವಸ್ಥಾಪಕ ನಿರ್ದೇಶಕ ರಾಯ್‌ ಮನ್ಜೂರ್‌ ನಾಸೀರ್‌ ಹೇಳಿದ್ದಾರೆ.

ಪುಸ್ತಕಗಳನ್ನು ಆಕ್ಸ್‌ಫರ್ಡ್‌, ಕೇಂಬ್ರಿಡ್ಜ್‌, ಲಿಂಕ್‌ ಇಂಟರ್‌ನ್ಯಾಷನಲ್‌, ಪಾರಾಗಾನ್‌ ಬುಕ್ಸ್‌ ಪ್ರಕಟಿಸಿವೆ. ಈ ಪ್ರಕಾಶನಗಳ10 ಸಾವಿರ ಆಕ್ಷೇಪಾರ್ಹ ಪುಸ್ತಕಗಳನ್ನುಸರ್ಕಾರಿ ಮತ್ತು ಖಾಸಗಿ ಶಾಲೆಗಳಿಂದ ವಾಪಸು ಪಡೆಯಲಾಗಿದೆ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.