ADVERTISEMENT

ಕೋವಿಡ್-19 ಮೂರನೇ ಅಲೆಗೆ ಪಾಕಿಸ್ತಾನ ಸಿದ್ಧವಾಗಿಲ್ಲ: ಬಿಲವಾಲ್‌ ಭುಟ್ಟೊ

ಏಜೆನ್ಸೀಸ್
Published 3 ಏಪ್ರಿಲ್ 2021, 7:24 IST
Last Updated 3 ಏಪ್ರಿಲ್ 2021, 7:24 IST
ಬಿಲಾವಾಲ್ ಭುಟ್ಟೋ-ಜರ್ದಾರಿ
ಬಿಲಾವಾಲ್ ಭುಟ್ಟೋ-ಜರ್ದಾರಿ   

ಜಾಕೋಬಾದ್:‌ದೇಶದ ಪ್ರತಿಯೊಬ್ಬ ನಾಗರಿಕರಿಗೆ ಲಸಿಕೆಯನ್ನು ಖರೀದಿಸಲು ಸರ್ಕಾರ ನಿರಾಕರಿಸಿದೆ. ಹೀಗಾಗಿ ಸದ್ಯ ಆರಂಭವಾಗಿರುವ ಕೋವಿಡ್-19 ಮೂರನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಲುಪಾಕಿಸ್ತಾನ ಸಮರ್ಪಕವಾಗಿ ಸಿದ್ಧಗೊಂಡಿಲ್ಲ ಎಂದುವಿರೋಧ ಪಕ್ಷದ ನಾಯಕ ಬಿಲಾವಾಲ್ ಭುಟ್ಟೋ-ಜರ್ದಾರಿ ಹೇಳಿದ್ದಾರೆ.

ಪಾಕಿಸ್ತಾನ ಪೀಪಲ್ಸ್‌ ಪಾರ್ಟಿ (ಪಿಪಿಎಲ್‌) ನಾಯಕರು ಮತ್ತು ಕಾರ್ಯಕರ್ತರೊಂದಿಗೆ ನಡೆದ ಸಭೆ ಬಳಿಕಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಜರ್ದಾರಿ, ಲಸಿಕೆ ಖರೀದಿ ವಿಚಾರದಲ್ಲಿ ಸರ್ಕಾರ ಮೊಂಡುತನ ಮುಂದುವರಿಸಿರುವುದರಿಂದ ಪಾಕಿಸ್ತಾನವು ಈ ಪ್ರದೇಶದ ಇತರ ರಾಷ್ಟ್ರಗಳಿಗಿಂತ ಹಿಂದುಳಿಯಲು ಕಾರಣವಾಗಿದೆ ಎಂದು ಆರೋಪಿಸಿರುವುದಾಗಿ ಡಾನ್‌ ವರದಿ ಮಾಡಿದೆ.

ʼಏರಿಕೆಯಾಗುತ್ತಿರುವ ಮತ್ತು ನಮ್ಮೆದುರು ಬರುತ್ತಿರುವ ಕೊರೊನಾವೈರಸ್‌ಮೂರನೇ ಅಲೆಯ ಸವಾಲಿಗೆ ಪಾಕಿಸ್ತಾನ ಸಿದ್ಧವಾಗಿಲ್ಲ. ಪಾಕಿಸ್ತಾನದ ಪ್ರತಿಯೊಬ್ಬ ವ್ಯಕ್ತಿಗೆ ಲಸಿಕೆ ಖರೀದಿಸುವಲ್ಲಿ ಮೊಂಡುತನ ತೋರುತ್ತಿರುವುದು ಇದಕ್ಕೆ ಕಾರಣವಾಗಿದ್ದು, ಲಸಿಕೆ ಖರೀದಿ ಮಾತ್ರವೇ ಇದಕ್ಕಿರುವ ಏಕೈಕ ಪರಿಹಾರವಾಗಿದೆʼ ಎಂದು ಹೇಳಿದ್ದಾರೆ.

ADVERTISEMENT

ಪಾಕಿಸ್ತಾನವುಕೋವಿಡ್-19 ಪತ್ತೆ ಹಚ್ಚುವಿಕೆ ಮತ್ತು ಲಸಿಕೆ ಅಭಿಯಾನದ ವಿಚಾರದಲ್ಲಿಭಾರತ, ಬಾಂಗ್ಲಾದೇಶ, ಅಫ್ಗಾನಿಸ್ತಾನ ಮತ್ತು ಶ್ರೀಲಂಕಾಗಿಂತ ಹಿಂದುಳಿದಿದೆ. ಅಫ್ಗಾನಿಸ್ತಾನ ಯುದ್ಧಪೀಡಿತ ದೇಶವಾಗಿದ್ದರೂ ನಮಗಿಂತ ಮುಂದಿದೆ ಎಂದು ಬಿಲಾವಲ್‌ ಅಭಿಪ್ರಾಯಪಟ್ಟಿದ್ದಾರೆ.

ʼಇದು ನಾಚಿಕೆಗೇಡಿನ ವಾಸ್ತವವೆಂದು ನಾನು ಭಾವಿಸುತ್ತೇನೆ.ಪಾಕಿಸ್ತಾನದ ಆರ್ಥಿಕ ಅಭಿವೃದ್ಧಿ ದರವು ಬಾಂಗ್ಲಾದೇಶ ಅಥವಾ ಅಫ್ಗಾನಿಸ್ತಾನಕ್ಕಿಂತ ಹಿಂದುಳಿದಿದೆ ಎಂಬುದಕ್ಕೆ ಕಾರಣಗಳು ಬೇಕಿಲ್ಲʼ ಎಂದು ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಫೆಬ್ರುವರಿ ಆರಂಭದಲ್ಲಿಯೇ ಲಸಿಕೆ ಅಭಿಯಾನ ಆರಂಭಿಸಲಾಗಿದ್ದು, ಬುಧವಾರದವರೆಗೆ ಒಟ್ಟು 8ಲಕ್ಷ ಡೋಸ್‌ನಷ್ಟು ವಿತರಿಸಲಾಗಿದೆ.

ಚೀನಾಫೆಬ್ರುವರಿ 1ರಂದು ಮೊದಲ ಹಂತದಲ್ಲಿ5ಲಕ್ಷ ಡೋಸ್‌ನಷ್ಟು ಲಸಿಕೆ ರವಾನಿಸಿತ್ತು.

ಚೀನಾದ ಲಸಿಕೆಹಾಕಿಸಿಕೊಳ್ಳಲು ಸಾಕಷ್ಟು ಆರೋಗ್ಯ ಕಾರ್ಯಕರ್ತರುನಿರಾಕರಿಸಿದ್ದರಿಂದ, ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ಕಳವಳ ವ್ಯಕ್ತವಾಗಿತ್ತು. ಇದರಿಂದಾಗಿ ಜನರೂ ನಿರಾಸಕ್ತಿ ತೋರಿದ್ದರಿಂದ ಪಾಕಿಸ್ತಾನದಲ್ಲಿ ಲಸಿಕೆ ಅಭಿಯಾನ ವಿಳಂಬವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.