ADVERTISEMENT

ಭಾರತದ ಯಾವುದೇ ಆಕ್ರಮಣಕ್ಕೆ ಪ್ರತಿಕ್ರಿಯಿಸುತ್ತೇವೆ: ಪಾಕಿಸ್ತಾನ

ಪಿಟಿಐ
Published 16 ಮೇ 2025, 16:35 IST
Last Updated 16 ಮೇ 2025, 16:35 IST
<div class="paragraphs"><p>ಪಾಕಿಸ್ತಾನ-ಭಾರತ</p></div>

ಪಾಕಿಸ್ತಾನ-ಭಾರತ

   

ರಾಯಿಟರ್ಸ್ ಚಿತ್ರ

ಇಸ್ಲಾಮಾಬಾದ್: ಭಾರತದ ಯಾವುದೇ ಆಕ್ರಮಣಕ್ಕೆ ಪ್ರತಿಕ್ರಿಯಿಸುವುದಾಗಿ ಪಾಕಿಸ್ತಾನ ಶುಕ್ರವಾರ ಹೇಳಿದೆ.

ADVERTISEMENT

ನಾಲ್ಕು ದಿನಗಳ ತೀವ್ರವಾದ ಗಡಿಯಾಚೆಗಿನ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ನಂತರ ಎರಡೂ ದೇಶಗಳು ಮಿಲಿಟರಿ ಸಂಘರ್ಷವನ್ನು ಕೊನೆಗೊಳಿಸಲು ಒಪ್ಪಿಕೊಂಡ ಸುಮಾರು ಒಂದು ವಾರದ ನಂತರ ಪಾಕಿಸ್ತಾನದಿಂದ ಈ ಹೇಳಿಕೆ ಹೊರಬಿದ್ದಿದೆ.

ಇತ್ತೀಚೆಗೆ, ಪಾಕಿಸ್ತಾನ-ಭಾರತ ಕದನ ವಿರಾಮ ಘೋಷಣೆಯು ಸಕಾರಾತ್ಮಕ ಬೆಳವಣಿಗೆಯಾಗಿದೆ. ಭಾರತವು ಅದರ ಅನುಷ್ಠಾನಕ್ಕೆ ನಿಷ್ಠೆಯಿಂದ ಬದ್ಧವಾಗಿರಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರ ಶಫ್ಕತ್ ಅಲಿ ಖಾನ್ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಆದರೂ, ಆಕ್ರಮಣವನ್ನು ತಪ್ಪಿಸಲು ಭಾರತವು ತನ್ನ ಬದ್ಧತೆ ಪ್ರದರ್ಶನವನ್ನು ಖಚಿತಪಡಿಸಿಕೊಳ್ಳುವಂತೆ ಅವರು ಮಿತ್ರರಾಷ್ಟ್ರಗಳಿಗೆ ಮನವಿ ಮಾಡಿದ್ದಾರೆ.

ಭಾರತವು ಯುದ್ಧವನ್ನು ಪುನರಾರಂಭಿಸಿದರೆ, ಪಾಕಿಸ್ತಾನಕ್ಕೆ ಪ್ರತಿಕ್ರಿಯಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನವು ಜವಾಬ್ದಾರಿಯುತ ರಾಷ್ಟ್ರವಾಗಿದ್ದು, ಯುದ್ಧ ವಿರಾಮಕ್ಕೆ ಬದ್ಧವಾಗಿದೆ ಮತ್ತು ಪ್ರಾದೇಶಿಕ ಸ್ಥಿರತೆ ಹಾಗೂ ಯುದ್ಧ ವಿರಾಮಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ವಕ್ತಾರ ಹೇಳಿದ್ದಾರೆ.

ಕದನ ವಿರಾಮ ಸ್ಥಾಪಿಸುವಲ್ಲಿ ಸ್ನೇಹಪರ ರಾಷ್ಟ್ರಗಳ ಪಾತ್ರವನ್ನು ಖಾನ್ ಶ್ಲಾಘಿಸಿದ್ದಾರೆ.

ಕಾಶ್ಮೀರ ಸಮಸ್ಯೆಗೆ ಪರಿಹಾರ ಒದಗಿಸಲು ಪಾಕಿಸ್ತಾನ ಮತ್ತು ಭಾರತದೊಂದಿಗೆ ತೊಡಗಿಸಿಕೊಳ್ಳುವ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಘೋಷಣೆಗೆ ತಮ್ಮ ಬೆಂಬಲವನ್ನು ಪುನರುಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.