ADVERTISEMENT

ಪಾಕ್‌ನಿಂದ ‘ಘಝ್ನವಿ’ ಕ್ಷಿಪಣಿ ಪರೀಕ್ಷೆ

ಅಣ್ವಸ್ತ್ರ ಸಿಡಿತಲೆಗಳನ್ನು 290 ಕಿಲೋ ಮೀಟರ್‌ವರೆಗೆ ಕೊಂಡೊಯ್ಯುವ ಸಾಮರ್ಥ್ಯ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2019, 16:34 IST
Last Updated 29 ಆಗಸ್ಟ್ 2019, 16:34 IST
s
s   

ಇಸ್ಲಾಮಾಬಾದ್‌: ಭೂಮಿಯಿಂದ ಭೂಮಿಗೆ ನೆಗೆಯುವ ‘ಘಝ್ನವಿ’ ಹೆಸರಿನ ಖಂಡಾಂತರ ಕ್ಷಿಪಣಿ ಪರೀಕ್ಷೆಯನ್ನು ಪಾಕಿಸ್ತಾನ ಗುರುವಾರ ಯಶಸ್ವಿಯಾಗಿ ಕೈಗೊಂಡಿದೆ.

ಅಣ್ವಸ್ತ್ರ ಹೊತ್ತೊಯ್ಯುವ ಕ್ಷಿಪಣಿ ಇದಾಗಿದೆ. ಜತೆಗೆ,290 ಕಿಲೋ ಮೀಟರ್‌ ದೂರದವರೆಗೆ ವಿವಿಧ ರೀತಿಯ ಸಿಡಿತಲೆಗಳನ್ನು ಕೊಂಡೊಯ್ಯುವ ಸಾಮರ್ಥ್ಯವನ್ನು ಸಹ ಹೊಂದಿದೆ ಎಂದು ಪಾಕಿಸ್ತಾನ ಸೇನೆ ತಿಳಿಸಿದೆ.

ಈ ಕ್ಷಿಪಣಿ ಪರೀಕ್ಷೆಯ ವಿಡಿಯೊವನ್ನುಮೇಜರ್‌ ಜನರಲ್‌ ಅಸೀಫ್‌ ಘಫೂರ್‌ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

‘ಘಝ್ನವಿ’ ಕ್ಷಿಪಣಿಯು‘ಸ್ಕಡ್‌’ ರೀತಿಯ ಖಂಡಾಂತರ ಕ್ಷಿಪಣಿಯ ಸುಧಾರಿತ ಮಾದರಿಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಕ್ಷಿಪಣಿ ಕ್ರಮಿಸುವ ವ್ಯಾಪ್ತಿಯು ಭಾರತದ ಹಲವು ಸ್ಥಳಗಳನ್ನು ಒಳಗೊಂಡಿದೆ.

ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಗಿರುವಾಗಲೇ ಈ ಕ್ಷಿಪಣಿ ಪರೀಕ್ಷೆ ನಡೆಸಿರುವುದು ಮಹತ್ವ ಪಡೆದಿದೆ.

ಕಳೆದ ಮೇ ತಿಂಗಳಲ್ಲಿ ಪಾಕಿಸ್ತಾನವು ‘ಶಾಹೀನ್–2’ ಕ್ಷಿಪಣಿ ಪರೀಕ್ಷೆ ನಡೆಸಿತ್ತು. ಇದಕ್ಕೂ ಮುನ್ನ, ‘ನಸ್ರ್‌’ ಖಂಡಾಂತರ ಕ್ಷಿಪಣಿ ಪರೀಕ್ಷೆ ಕೈಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.