ADVERTISEMENT

ವಿಮಾನ ಅಪಘಾತ: 9 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 5:57 IST
Last Updated 1 ಡಿಸೆಂಬರ್ 2019, 5:57 IST
   

ಚೆಂಬರ್ಲಿನ್(ದಕ್ಷಿಣ ದಕೊಟ): 12 ಮಂದಿಯನ್ನು ಸಾಗಿಸುತ್ತಿದ್ದ ಲಘು ವಿಮಾನ ಅಪಘಾತಕ್ಕೀಡಾಗಿ ಪೈಲಟ್ ಸೇರಿ 9 ಮಂದಿ ಸಾವನ್ನಪ್ಪಿ ಮೂವರು ಗಾಯಗೊಂಡಿರುವ ಘಟನೆ ಇಲ್ಲಿನ ದಕೊಟದಲ್ಲಿ ಸಂಭವಿಸಿದೆ.

ಶನಿವಾರ 12.30ಕ್ಕೆ ಚೆಂಬರ್ಲಿನ್ ನಿಲ್ದಾಣದಿಂದ ಟೇಕ್ ಆಫ್ ಆದ ವಿಮಾನ ಹವಾಮಾನ ವೈಪರೀತ್ಯದಿಂದಾಗಿ ಇಲ್ಲಿನ ಸಿಯಾಕ್ಸ್ ಜಲಪಾತದ ಬಳಿ ಅಪಘಾತಕ್ಕೀಡಾಗಿದೆ. ಪರಿಣಾಮ ಸ್ಥಳದಲ್ಲಿಯೇ 9 ಮಂದಿ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ ಎಂದುರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (ನ್ಯಾಷನಲ್ ಟ್ರಾನ್ಸ್ ಪೋರ್ಟೇಷನ್ ಸೇಫ್ಟಿ ಬೋರ್ಡ್)ಯಪೀಟರ್ ನಡ್ಸನ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಸಿಯಾಕ್ಸ್ ಜಲಪಾತದ ಬಳಿ ಡಿಕ್ಕಿ ಹೊಡೆದು ನಂತರ ಇಡಾಹೋ ಬಳಿ ಪತ್ತೆಯಾಗಿದೆ.ಅಪಘಾತದ ವೇಳೆ ಚಂಬರ್ಲಿನ್, ಕೇಂದ್ರ ದಕೊಟ, ದಕ್ಷಿಣ ದಕೊಟ ಸುತ್ತಮುತ್ತಲಿನ ಪ್ರದೇಶದಲ್ಲಿ ಚಳಿಗಾಲದ ಗಾಳಿ ವೇಗವಾಗಿ ಬೀಸುತ್ತಿದ್ದು ಮೋಡಕವಿದ ವಾತಾವರಣವಿತ್ತು. ವಿಮಾನ ಹಾರಾಟಕ್ಕೆ ಯೋಗ್ಯವಾಗಿರಲಿಲ್ಲ. ಹವಾಮಾನ ವೈಪರೀತ್ಯದಿಂದಾಗಿ ತನಿಖೆಯೂ ವಿಳಂಬವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಮೃತಪಟ್ಟವರನ್ನು ಸ್ಥಳೀಯ ವ್ಯಾಪಾರಿಗಳಾದ ಜಿಮ್ ಮತ್ತು ಕಿರ್ಕ್ ಹನ್ಸನ್, ವಿಮಾನದ ಪೈಲಟ್, ಇಬ್ಬರು ಮಕ್ಕಳು, ನಾಲ್ವರು ಪುರುಷರು ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದ್ದು,ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹನ್ಸನ್ ಕೆ ಅಂಡ್ ಜೆ ಸೂಪರ್ ಸ್ಟೋರ್ ನಡೆಸುತ್ತಿದ್ದು, ಆಯಿಲ್ ಕಂಪನಿಯೊಂದರ ಮಾಲೀಕರಾಗಿದ್ದಾರೆ. ಅಲ್ಲದೆ, ಹೆಲ್ತ್ ಅಂಡ್ ವೆಲ್ ನೆಸ್ ಕಂಪನಿಯ ಮಾಲೀಕರಾಗಿದ್ದಾರೆ.ಇಲ್ಲಿ ನಡೆಯುವ ಥ್ಯಾಂಕ್ಸ್ ಗಿವಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೆಗೆ ವಾಪಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.