ADVERTISEMENT

ನ್ಯುಮೋನಿಯಾ: ನಿಲ್ಲದ ಸಾವು ನೋವು

ಪಿಟಿಐ
Published 12 ನವೆಂಬರ್ 2018, 20:00 IST
Last Updated 12 ನವೆಂಬರ್ 2018, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಂಡನ್: 2030ರ ಹೊತ್ತಿಗೆ ಭಾರತದಲ್ಲಿ 17 ಲಕ್ಷಕ್ಕೂ ಹೆಚ್ಚು ಮಕ್ಕಳು ನ್ಯೂಮೋನಿಯಾಕ್ಕೆ ಬಲಿಯಾಗಲಿದ್ದಾರೆ ಎಂದು ಸೇವ್ ದಿ ಚಿಲ್ಡ್ರನ್‌ ಸಂಸ್ಥೆಯ ಅಧ್ಯಯನ ವರದಿ ಸೋಮವಾರ ಎಚ್ಚರಿಸಿದೆ.

ಪರಿಹಾರ ಇದೆ

ಐದು ವರ್ಷದೊಳಗಿನ ಶೇ 90ರಷ್ಟು ಮಕ್ಕಳಿಗೆ ಲಸಿಕೆ ನೀಡಿದಲ್ಲಿ, 6 ಲಕ್ಷ ಮಕ್ಕಳ ಜೀವ ಉಳಿಸಬಹುದು. ಕಡಿಮೆ ದರದ ಆ್ಯಂಟಿಬಯೊಟಿಕ್‌ ಪೂರೈಸಿದಲ್ಲಿ 19 ಲಕ್ಷ ಹಾಗೂ ಪೌಷ್ಠಿಕ ಆಹಾರ ಒದಗಿಸಿದಲ್ಲಿ 25 ಲಕ್ಷ ಮಕ್ಕಳನ್ನು ಸೋಂಕಿನಿಂದ ಕಾಪಾಡಬಹುದು. ಎಲ್ಲ ಕ್ರಮಗಳು ಸಾಧ್ಯವಾದಲ್ಲಿ 40 ಲಕ್ಷ ಮಕ್ಕಳು ಬದುಕುಳಿಯಲಿದ್ದಾರೆ ಎಂದು ಅಧ್ಯಯನ ವರದಿ ತಿಳಿಸಿದೆ.

ADVERTISEMENT

ಅಧ್ಯಯನ ಹೇಗೆ..?

ಅಮೆರಿಕದ ಜಾನ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿಪಡಿಸಿರುವ ಮಾದರಿಯನ್ನು ಬಳಸಿಕೊಂಡು ಈ ಮುನ್ಸೂಚನೆಗಳನ್ನು ನೀಡಲಾಗಿದೆ.

ನ್ಯುಮೋನಿಯಾ ವೃತ್ತಾಂತ...

* ಜಾಗತಿಕವಾಗಿ ಮಕ್ಕಳ ಸಾವಿಗೆ ಕಾರಣವಾಗುವ ಅತಿದೊಡ್ಡ ಸಾಂಕ್ರಾಮಿಕ ರೋಗ ನ್ಯುಮೋನಿಯಾ

*ಮಲೇರಿಯಾ, ಡಯೇರಿಯಾ, ದಡಾರ ಸೋಂಕುಗಳಿಗಿಂತ ಹೆಚ್ಚಾಗಿ ಇದು ಬಾಧಿಸುತ್ತದೆ.

*2016ರಲ್ಲಿ 2 ವರ್ಷದೊಳಗಿನ 8.80 ಲಕ್ಷ ಮಕ್ಕಳು ಮೃತಪಟ್ಟಿದ್ದಾರೆ.

*ಸೋಂಕಿನ ಬಗ್ಗೆ ಜಾಗೃತಿಗಾಗಿಸಮಾವೇಶಗಳಾಗಲಿ, ಜಾಥಾಗಳಾಗಲೀ ನಡೆಯುತ್ತಿಲ್ಲ. ಇದು ಸದ್ದಿಲ್ಲದೇ ಮಕ್ಕಳನ್ನು ಬಲಿಹಾಕುತ್ತಿದೆ.

**

ಇದಕ್ಕೆ ಲಸಿಕೆ ಲಭ್ಯವಿದೆ. ಆ್ಯಂಟಿಬಯಾಟಿಕ್‌ನ ಒಂದು ಕೋರ್ಸ್‌ಗೆ ಸುಮಾರು ₹25 ರೂಪಾಯಿ ವೆಚ್ಚವಾಗಲಿದೆ (54 ಸೆಂಟ್ಸ್ ಆಸ್ಟ್ರೇಲಿಯನ್ ಡಾಲರ್)

– ಪೌಲ್ ರೊನಾಲ್ಡ್ಸ್, ಸೇವ್ ದಿ ಚಿಲ್ಡ್ರನ್‌ನ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.