ADVERTISEMENT

ರೋಮ್‌ | ಕ್ರಿಸ್‌ಮಸ್‌ ಪ್ರಾರ್ಥನೆ; ಪೋಪ್ ಫ್ರಾನ್ಸಿಸ್‌ ಭಾಗಿ

ಏಜೆನ್ಸೀಸ್
Published 25 ಡಿಸೆಂಬರ್ 2021, 11:11 IST
Last Updated 25 ಡಿಸೆಂಬರ್ 2021, 11:11 IST
ವ್ಯಾಟಿಕ್‌ನ ಸೇಂಟ್‌ ಪೀಟರ್‌ ಬೆಸಿಲಿಕಾದಲ್ಲಿ ನಡೆದ ಕ್ರಿಸ್‌ಮಸ್ ಮುನ್ನಾದಿನದ ಪ್ರಾರ್ಥನೆಯಲ್ಲಿ ಪೋಪ್‌ ಫ್ರಾನ್ಸಿಸ್ ಭಾಗವಹಿಸಿದ್ದರು
ವ್ಯಾಟಿಕ್‌ನ ಸೇಂಟ್‌ ಪೀಟರ್‌ ಬೆಸಿಲಿಕಾದಲ್ಲಿ ನಡೆದ ಕ್ರಿಸ್‌ಮಸ್ ಮುನ್ನಾದಿನದ ಪ್ರಾರ್ಥನೆಯಲ್ಲಿ ಪೋಪ್‌ ಫ್ರಾನ್ಸಿಸ್ ಭಾಗವಹಿಸಿದ್ದರು   

ರೋಮ್‌: ಪೋಪ್‌ ಫ್ರಾನ್ಸಿಸ್‌ ಅವರು ಕ್ರಿಸ್‌ಮಸ್‌ ಮುನ್ನಾದಿನವಾದಶುಕ್ರವಾರ ಇಲ್ಲಿನ ಸೇಂಟ್‌ ಪೀಟರ್‌ ಬೆಸಿಲಿಕಾದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. 2,000 ಮಂದಿ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.

ಕೋವಿಡ್‌ ಸ್ಥಿತಿಯ ಹಿನ್ನೆಲೆಯಲ್ಲಿ ವ್ಯಾಟಿಕನ್‌ ಸಿಬ್ಬಂದಿಗೆ ಲಸಿಕೆ ಪಡೆಯುವುದನ್ನು ಕಡ್ಡಾಯಪಡಿಸಲಾಗಿತ್ತು. ಪೋಪ್ ಅವರು ಚರ್ಚ್‌ಗೆ ಆಗಮಿಸುತ್ತಿದ್ದಂತೆಯೇ ಸಾಮೂಹಿಕ ಪ್ರಾರ್ಥನೆ ಶುರುವಾಯಿತು.ಪೋಪ್‌ ಅವರು ಕಾರ್ಯಕ್ರಮದುದ್ದಕ್ಕೂ ಮಾಸ್ಕ್‌ ಧರಿಸಿರಲಿಲ್ಲ.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಜೀಸಸ್‌ ಅವರು ಸೂಕ್ತವಾದ ಕೊಟ್ಟಿಗೆಯೂ ಇಲ್ಲದ ಸ್ಥಿತಿಯಲ್ಲಿ ಬಡವರಾಗಿ ಜಗತ್ತಿಗೆ ಬಂದರು ಎಂದು ಹೇಳಿದ ಅವರು, ಜನತೆಗೆ ತಮ್ಮ ಮೇಲೆ ತಾವು ನಂಬಿಕೆ ಹೊಂದಿರಬೇಕು’ ಎಂದರು.

ADVERTISEMENT

ಕಳೆದ ವರ್ಷ ಇಟಲಿಯಲ್ಲಿ ಪೂರ್ಣ ಲಾಕ್‌ಡೌನ್‌ ಇದ್ದು, ಆಗ 200 ಜನರಿಗಷ್ಟೇ ಪ್ರವೇಶವಿತ್ತು. ಈ ವರ್ಷ ಯಾವುದೇ ಕರ್ಫ್ಯೂ, ನಿರ್ಬಂಧ ಇರಲಿಲ್ಲ. ಆದರೆ, ಕೋವಿಡ್‌ ಪ್ರಕರಣಗಳ ಸಂಖ್ಯೆ 2020ರಲ್ಲಿ ಇದ್ದುದಕ್ಕಿಂತಲೂ ಹೆಚ್ಚಿದೆ. ಇಟಲಿಯಲ್ಲಿ ಶುಕ್ರವಾರ 50,599 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 141 ಮಂದಿ ಮೃತಪಟ್ಟಿದ್ದರು.

ಓಮೈಕ್ರಾನ್‌ ಸೋಂಕು ಇಟಲಿಯಲ್ಲಿಯೂ ಕಾಣಿಸಿಕೊಂಡಿದ್ದು, ವ್ಯಾಟಿಕನ್‌ನ ಸಿಬ್ಬಂದಿಗೆ ಲಸಿಕೆ ಕಡ್ಡಾಯ ಪಡಿಸಲಾಗಿತ್ತು. ಆದರೆ, ಪ್ರಾರ್ಥನೆಗೆ ಬರುವವರಿಗೆ ಲಸಿಕೆ ಕಡ್ಡಾಯ ಇರಲಿಲ್ಲ. ಆದರೆ, ಮಾಸ್ಕ್‌ ಧರಿಸಿರಬೇಕಿತ್ತು. ಬಿಷಪ್‌, ಕಾರ್ಡಿನಲ್ಸ್‌ ಸೇರಿದಂತೆ ಎಲ್ಲರೂ ಮಾಸ್ಕ್‌ ಧರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.