ADVERTISEMENT

ಪೋಪ್‌ ಲಿಯೋ–14, ಜೆ.ಡಿ.ವ್ಯಾನ್ಸ್‌ ಭೇಟಿ: ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚೆ

ಏಜೆನ್ಸೀಸ್
Published 19 ಮೇ 2025, 13:53 IST
Last Updated 19 ಮೇ 2025, 13:53 IST
   

ರೋಮ್: ಪೋಪ್‌ ಲಿಯೋ–14 ಮತ್ತು ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್‌ ಅವರು ವ್ಯಾಟಿಕನ್‌ನಲ್ಲಿ ಸೋಮವಾರ ಭೇಟಿಯಾದರು. ರಷ್ಯಾ ಮತ್ತು ಉಕ್ರೇನ್ ನಡುವೆ ಕದನ ವಿರಾಮ ಘೋಷಣೆಗೆ ಅಮೆರಿಕ ನೇತೃತ್ವದಲ್ಲಿ ರಾಜತಾಂತ್ರಿಕ ಯತ್ನಗಳು ನಡೆದಿರುವ ಸಂದರ್ಭದಲ್ಲಿಯೇ ಈ ಭೇಟಿ ನಡೆದಿದೆ.

ಈ ಸಭೆಯಲ್ಲಿ ವಿದೇಶಾಂಗ ಕಾರ್ಯದರ್ಶಿ ಮ್ಯಾಕ್ರೊ ರುಬಿಯೊ ಸಹ ಭಾಗಿಯಾಗಿದ್ದರು ಎಂದು ವ್ಯಾನ್ಸ್‌ ಅವರ ವಕ್ತಾರ ಲ್ಯೂಕ್‌ ಸ್ಕ್ರೋಡರ್‌ ಅವರು ತಿಳಿಸಿದರು. 

‘ಸಭೆಯಲ್ಲಿ ಪ್ರಸಕ್ತ ಅಂತರರಾಷ್ಟ್ರೀಯ ವಿದ್ಯಮಾನಗಳು, ಸಂಘರ್ಷ ಉಂಟಾಗಿರುವ ಪ್ರದೇಶಗಳಲ್ಲಿ ಮಾನವೀಯ ಕಾನೂನು ಮತ್ತು ಅಂತರರಾಷ್ಟ್ರೀಯ ಕಾನೂನಿನ ಅನುಷ್ಠಾನ ಹಾಗೂ ಸಂಘರ್ಷ ಶಮನಕ್ಕೆ ಉಭಯ ತಂಡಗಳ ಮಧ್ಯೆ ಮಾತುಕತೆ ನಡೆಸುವ ಬಗ್ಗೆ ವಿಚಾರ ವಿನಿಮಯ ನಡೆಯಿತು’ ಎಂದು ವ್ಯಾಟಿಕನ್‌ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

ವ್ಯಾನ್ಸ್‌ ಅವರು ಭಾನುವಾರ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಯುರೋಪ್ ಒಕ್ಕೂಟದ ಅಧ್ಯಕ್ಷ ಉರ್ಸುಲಾ ವೊನ್‌ ಲೆಯೆನ್‌ ಹಾಗೂ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನೂ ಭೇಟಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.