ಇಸ್ಲಾಮಾಬಾದ್: ‘ದೀರ್ಘಕಾಲಿನ ಕಾರ್ಯಯಂತ್ರದ ಭಾಗವಾಗಿ ಪರಸ್ಪರ ಲಾಭವಾಗುವ ವ್ಯಾಪಾರ ಪಾಲುದಾರಿಕೆ ಹೊಂದಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತೀವ್ರ ಆಸಕ್ತಿ ಹೊಂದಿದ್ದಾರೆ’ ಎಂದು ಪಾಕಿಸ್ತಾನ ಸೇನೆ ತಿಳಿಸಿದೆ.
ಶ್ವೇತಭವನದಲ್ಲಿ ಬುಧವಾರ ನಡೆದ ಪಾಕಿಸ್ತಾನ ಸೇನೆಯ ಮುಖ್ಯಸ್ಥ ಜನರಲ್ ಅಸೀಂ ಮುನೀರ್ ಹಾಗೂ ಟ್ರಂಪ್ ಜೊತೆಗಿನ ಸಭೆಯ ಬಳಿಕ ಪಾಕ್ ಸೇನೆ ಸಾರ್ವಜನಿಕ ಸಂಪರ್ಕ ಆಂತರಿಕ ಸೇವೆ ನಿರ್ದೇಶನಾಲಯ (ಐಎಸ್‌ಪಿಆರ್)ವು ಬಿಡುಗಡೆಗೊಳಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
‘ಭಯೋತ್ಪಾದನೆಯನ್ನು ನಿಗ್ರಹಿಸಲು ಜಂಟಿ ಪ್ರಯತ್ನ, ವ್ಯಾಪಾರ, ಗಣಿಗಾರಿಕೆ, ಖನಿಜ, ಕೃತಕ ಬುದ್ಧಿಮತ್ತೆ, ಇಂಧನ, ಕ್ರಿಫ್ಟೋ ಕರೆನ್ಸಿ ಹಾಗೂ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ದ್ವಿಪಕ್ಷೀಯ ಸಹಕಾರ ಹೆಚ್ಚಿಸಲು ಉನ್ನತ ಮಟ್ಟದ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ’ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.