ADVERTISEMENT

ಚೀನಾ ಮುಕ್ತಗೊಳಿಸಿ: ಶ್ವೇತ ಭವನದ ಎದುರು ‍ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 12:40 IST
Last Updated 5 ಡಿಸೆಂಬರ್ 2022, 12:40 IST
ಚೀನಾ ಸರ್ಕಾರದ ವಿರುದ್ಧ ಹಾಗೂ ಕಠಿಣ ಕೋವಿಡ್ ನಿಯಮ ಕೈಬಿಡುವಂತೆ ಒತ್ತಾಯಿಸಿ ಭಾನುವಾರ ವಾಷಿಂಗ್ಟನ್‌ನ ಫ್ರೀಡಂ ಪ್ಲಾಜಾದಲ್ಲಿ ಪ್ರತಿಭಟನೆ ನಡೆಸಲಾಯಿತು. – ಎಪಿ ಚಿತ್ರ
ಚೀನಾ ಸರ್ಕಾರದ ವಿರುದ್ಧ ಹಾಗೂ ಕಠಿಣ ಕೋವಿಡ್ ನಿಯಮ ಕೈಬಿಡುವಂತೆ ಒತ್ತಾಯಿಸಿ ಭಾನುವಾರ ವಾಷಿಂಗ್ಟನ್‌ನ ಫ್ರೀಡಂ ಪ್ಲಾಜಾದಲ್ಲಿ ಪ್ರತಿಭಟನೆ ನಡೆಸಲಾಯಿತು. – ಎಪಿ ಚಿತ್ರ   

ವಾಷಿಂಗ್ಟನ್‌: ಚೀನಾದಲ್ಲಿ ಹೇರಲಾಗಿರುವ ಕಠಿಣ ಕೋವಿಡ್ ನಿರ್ಬಂಧಗಳನ್ನು ಕೈ ಬಿಡುವಂತೆ ಹಾಗೂ ರಾಜಕೀಯ ಬದಲಾವಣೆಯನ್ನು ಬೆಂಬಲಿಸಿಭಾನುವಾರ ಶ್ವೇತ ಭವನದ ಎದುರು 200ಕ್ಕೂ ಹೆಚ್ಚು ಪ್ರತಿಭಟನಾಕಾರರು ಮೋಂಬತ್ತಿ ಹಾಗೂ ‘ಫ್ರೀ ಚೀನಾ’ ಎಂಬ ಫಲಕ ಹಿಡಿದು ಪ್ರತಿಭಟನೆ ನಡೆಸಿದರು.

ಚೀನಾ ಅಧ್ಯಕ್ಷ ಷಿ ಜಿಂಗ್‌ಪಿನ್ ಹಾಗೂ ಆಡಳಿತಾರೂಢ ಕಮ್ಯುನಿಸ್ಟ್‌ ಪಕ್ಷ ಅಧಿಕಾರದಿಂದ ಕೆಳಗಿಳಿಯಬೇಕು ಎಂಬ ಕೂಗು ಕೇಳಿಬಂದಿದ್ದು,ಚೀನಾದ ಉರುಮ್ಕಿಯಲ್ಲಿ ನ 25ರಂದು ನಡೆದ ಬೆಂಕಿ ಅವಘಡದಲ್ಲಿ 10 ಮಂದಿ ಮೃತಪಟ್ಟ ನಂತರ ಪ್ರತಿಭಟನೆ ತೀವ್ರಗೊಂಡಿತ್ತು. ಕಠಿಣವಾದ ಕೋವಿಡ್ ನಿಯಮದಿಂದಾಗಿ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಚೀನಾದಲ್ಲಿ ವಾಕ್ ಸ್ವಾತಂತ್ರ್ಯ ಕೂಡ ಇಲ್ಲ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT