ADVERTISEMENT

‘ರಿಷಿ ಸುನಕ್‌ ಬ್ರಿಟನ್ ನ ಬರಾಕ್ ಒಬಾಮ’

ಪಿಟಿಐ
Published 25 ಅಕ್ಟೋಬರ್ 2022, 14:22 IST
Last Updated 25 ಅಕ್ಟೋಬರ್ 2022, 14:22 IST
ಡೌನಿಂಗ್‌ ಸ್ಟ್ರೀಟ್‌ ಹೊರಗೆ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡುತ್ತಿರುವ ರಿಷಿ ಸುನಕ್ –ಎಎಫ್‌ಪಿ ಚಿತ್ರ
ಡೌನಿಂಗ್‌ ಸ್ಟ್ರೀಟ್‌ ಹೊರಗೆ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡುತ್ತಿರುವ ರಿಷಿ ಸುನಕ್ –ಎಎಫ್‌ಪಿ ಚಿತ್ರ   

ಲಂಡನ್: ರಿಷಿ ಸುನಕ್‌ ಅವರು ಬ್ರಿಟನ್‌ನ ಪ್ರಧಾನಿಯಾಗಿದ್ದು, ಅವರು ‘ನಮ್ಮ ಬರಾಕ್‌ ಒಬಾಮ’ ಎಂದು ರಿಷಿ ಅವರ ಅಜ್ಜ ನಿರ್ಮಿಸಿದ ಹಿಂದೂ ದೇಗುಲದ ಮುಖಂಡರೊಬ್ಬರು ಹೇಳಿದರು.

‘ರಿಷಿ ಅವರು ಬ್ರಿಟನ್‌ನಲ್ಲಿ ಬರಾಕ್‌ ಒಬಾಮರಂತೆ ಭಾಸವಾಗುತ್ತಿದ್ದಾರೆ. ಮೊಟ್ಟ ಮೊದಲ ಬಾರಿಗೆ ಬಿಳಿಯೇತರ, ಭಾರತ ಮೂಲದ ಮತ್ತು ಹಿಂದೂ ವ್ಯಕ್ತಿ ಬ್ರಿಟನ್‌ ಪ್ರಧಾನಿ ಹುದ್ದೆಗೆ ಏರಿರುವುದು ಅತ್ಯಂತ ಹೆಮ್ಮೆಯ ಸಂಗತಿ’ ಎಂದು ಸಂಜಯ್‌ ಚಂದರಣ ಅವರು ಹೇಳಿದ್ದಾರೆ.

ಸೌತ್‌ಹ್ಯಾಂಪ್ಟನ್‌ನಲ್ಲಿರುವ ವೇದಿಕ್‌ ಸಮಾಜದ ಹಿಂದೂ ದೇಗುಲವನ್ನು ರಿಷಿ ಸುನಕ್ ಅವರ ಅಜ್ಜ ರಾಮ್‌ದಾಸ್ ಸುನಕ್‌ ಅವರು 1971ರಲ್ಲಿ ನಿರ್ಮಿಸಿದ್ದರು. 1980ರಿಂದ ರಿಷಿ ಸುನಕ್‌ ಈ ದೇಗುಲದ ಟ್ರಸ್ಟಿಯಾಗಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ರಿಷಿ ಅವರು ಆಗಾಗ ಈ ದೇಗುಲಕ್ಕೆ ಭೇಟಿ ನೀಡುತ್ತಾರೆ.

ADVERTISEMENT

ಹಳೆಯ ಪೋಡಿಯಂ ಬಳಸಿ ಭಾಷಣ

ರಿಷಿ ಸುನಕ್ ಅವರು ಬ್ರಿಟನ್‌ ಪ್ರಧಾನಿಗಳ ಅಧಿಕೃತ ನಿವಾಸ ಡೌನಿಂಗ್ ಸ್ಟ್ರೀಟ್‌ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡುವಾಗ ಈ ಹಿಂದಿನ ಆಡಳಿತದಲ್ಲಿ ಬಳಸಿದ್ದ ಪೋಡಿಯಂ ಅನ್ನೇ ಬಳಸಿದರು.

ಸಾಂಪ್ರದಾಯಿಕವಾಗಿ ನೂತನ ಪ್ರಧಾನಿಗಳು ಹೊಸ ಪೋಡಿಯಂ ಬಳಸಿಯೇ ಭಾಷಣ ಮಾಡುತ್ತಾರೆ. ಆದರೆಹೊಸದಾಗಿ ಪೋಡಿಯಂ ವಿನ್ಯಾಸಗೊಳಿಸಲು ಸಮಯ ಇರದ ಕಾರಣ ಹಳೆಯ ಪೋಡಿಯಂ ಬಳಸಿದರು. ಪೋಡಿಯಂ ನಿರ್ಮಾಣಕ್ಕೆ ಸುಮಾರು ಮೂರು ವಾರ ತಗುಲುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.