ADVERTISEMENT

ದಕ್ಷಿಣ ಆಫ್ರಿಕಾದಲ್ಲಿ ಬಡತನ, ನಿರುದ್ಯೋಗದ ವಿರುದ್ಧ ಹೋರಾಡಲು ‘ಸೀರೆ’ ನೆರವು!

ಪಿಟಿಐ
Published 29 ನವೆಂಬರ್ 2019, 5:55 IST
Last Updated 29 ನವೆಂಬರ್ 2019, 5:55 IST
   

ಜೊಹಾನ್ಸ್‌ಬರ್ಗ್‌: ಭಾರತದಿಂದ ಸಂಗ್ರಹಿಸಿದ ಬಳಸಿದ ಸೀರೆಗಳನ್ನು ಮರುಬಳಕೆ ಮಾಡುವ ಯೋಜನೆಯು ದಕ್ಷಿಣ ಆಫ್ರಿಕಾದಲ್ಲಿ ಬಡತನ ಮತ್ತು ನಿರುದ್ಯೋಗ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಕಾರಿಯಾಗಿದೆ.

2014ರಲ್ಲಿ ರಯಾನಾ ಎಡ್ವರ್ಡ್ಸ್‌ ಅವರು ‘ಸಾರಿ ಫಾರ್‌ ಚೇಂಜ್‌’ ಹೆಸರಿನಲ್ಲಿ ಈ ಯೋಜನೆಯನ್ನು ಆರಂಭಿಸಿದ್ದರು. ಬಳಸಿದ ಸೀರೆಗಳನ್ನು ದಾನವಾಗಿ ನೀಡುವಂತೆ ಅವರು ಕರೆ ನೀಡಿದ್ದರು.

ಉತ್ತರ ಜೊಹಾನ್ಸ್‌ಬರ್ಗ್‌ನ ನಾರ್ತ್‌ ರೈಡಿಂಗ್‌ನಲ್ಲಿ ಮಹಿಳೆಯರಿಗೆ ಕಾರ್ಯಾಗಾರ ನಡೆಸಿ ಸೀರೆಗಳಿಂದ ವಿವಿಧ ಉಡುಪುಗಳನ್ನು ತಯಾರಿಸಲು ತರಬೇತಿ ನೀಡಲಾಗಿದೆ. ಇದರ ಯಶಸ್ಸಿನಿಂದ ಪ್ರೇರಣೆಗೊಂಡು ಸೊವೆಟೊ ಪಟ್ಟಣದಲ್ಲೂ ಕಾರ್ಯಾಗಾರ ಹಮ್ಮಿಕೊಂಡು ಆರು ಮಂದಿ ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದೆ.

ADVERTISEMENT

ಈ ಯೋಜನೆಗೆ ದಕ್ಷಿಣ ಆಫ್ರಿಕಾದ ಮಹಿಳಾ ಸಂಘ ಕೂಡ ಸಹಕಾರ ನೀಡಿದೆ. ಸಂಗ್ರಹಿಸಿದ ಸೀರೆಗಳನ್ನು ಆರಂಭದಲ್ಲಿ ವಿಂಗಡಿಸಿ, ಸ್ವಚ್ಛಗೊಳಿಸಿ ಅನಂತರ ಅದರಿಂದ ವಿವಿಧ ವಿನ್ಯಾಸಗಳ ಉಡುಪುಗಳನ್ನು ತಯಾರಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.