ADVERTISEMENT

ಅಫ್ಗಾನ್‌ ಪ್ರವಾಹ: ಮೃತರ ಸಂಖ್ಯೆ 160ಕ್ಕೆ ಏರಿಕೆ

ಏಜೆನ್ಸೀಸ್
Published 27 ಆಗಸ್ಟ್ 2020, 16:39 IST
Last Updated 27 ಆಗಸ್ಟ್ 2020, 16:39 IST
ಪ್ರವಾಹ ಸಂಭವಿಸಿದ ಚಾರೀಕರ್ ನಗರದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯಿತು –ರಾಯಿಟರ್ಸ್‌ ಚಿತ್ರ
ಪ್ರವಾಹ ಸಂಭವಿಸಿದ ಚಾರೀಕರ್ ನಗರದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯಿತು –ರಾಯಿಟರ್ಸ್‌ ಚಿತ್ರ   

ಚಾರೀಕರ್‌ (ಅಫ್ಗಾನಿಸ್ತಾನ): ಅಫ್ಗಾನಿಸ್ತಾನದಲ್ಲಿಭಾರಿ ಮಳೆ ಮತ್ತು ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 160ಕ್ಕೆ ಏರಿಕೆಯಾಗಿದೆ.

ಹಲವು ಕಟ್ಟಡಗಳು ಕುಸಿದಿವೆ. ರಕ್ಷಣಾಕಾರ್ಯಭರದಿಂದ ಸಾಗಿದೆ. ಮಂಗಳವಾರ ಉಂಟಾದ ಪ್ರವಾಹದಲ್ಲಿ ಚಾರೀಕರ್‌ ನಗರವೊಂದರಲ್ಲೇ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರೆ.ಪರ್ವಾನ್‌ ಪ್ರಾಂತ್ಯದಲ್ಲಿ ಸುಮಾರು 200 ಮನೆಗಳು ಹಾನಿಗೊಂಡಿದ್ದು, 600 ಜಾನುವಾರುಗಳು ಮೃತಪಟ್ಟಿವೆ ಎಂದು ಹಿರಿಯ ಅಧಿಕಾರಿ ಖಾಸಿಮ್ ಹೈದಾರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT