ADVERTISEMENT

ಸಿಂಗಪುರ ಏರ್‌ ಷೋಗೆ ಚಾಲನೆ: ಕೋವಿಡ್‌ ಕಾರಣದಿಂದ ಎರಡು ವರ್ಷ ನಡೆದಿರಲಿಲ್ಲ

ಕೋವಿಡ್‌ ಕಾರಣದಿಂದ ಎರಡು ವರ್ಷಗಳಿಂದ ನಡೆಯದ ಪ್ರದರ್ಶನ

ಏಜೆನ್ಸೀಸ್
Published 15 ಫೆಬ್ರುವರಿ 2022, 10:16 IST
Last Updated 15 ಫೆಬ್ರುವರಿ 2022, 10:16 IST
ಸಿಂಗಪುರದಲ್ಲಿ ಮಂಗಳವಾರ ಆರಂಭಗೊಂಡ ಏರ್‌ ಷೋನಲ್ಲಿ ಇಂಡೊನೇಷ್ಯಾದ ವಾಯುಪಡೆಯ ‘ಜುಪಿಟರ್’ ತಂಡದ ವಿಮಾನಗಳು ಪ್ರದರ್ಶಿಸಿದ ವೈಮಾನಿಕ ಕಸರತ್ತು –ರಾಯಿಟರ್ಸ್‌ ಚಿತ್ರ
ಸಿಂಗಪುರದಲ್ಲಿ ಮಂಗಳವಾರ ಆರಂಭಗೊಂಡ ಏರ್‌ ಷೋನಲ್ಲಿ ಇಂಡೊನೇಷ್ಯಾದ ವಾಯುಪಡೆಯ ‘ಜುಪಿಟರ್’ ತಂಡದ ವಿಮಾನಗಳು ಪ್ರದರ್ಶಿಸಿದ ವೈಮಾನಿಕ ಕಸರತ್ತು –ರಾಯಿಟರ್ಸ್‌ ಚಿತ್ರ   

ಸಿಂಗಪುರ: ‘ಸಿಂಗ‍ಪುರ ಏರ್‌ ಷೋ’ಗೆ ಮಂಗಳವಾರ ಸರಳವಾಗಿ ಚಾಲನೆ ನೀಡಲಾಯಿತು. ಈ ವೈಮಾನಿಕ ಪ್ರದರ್ಶನ ಮೂರು ದಿನಗಳ ಕಾಲ ನಡೆಯಲಿದೆ.

ಕೋವಿಡ್–19 ಪಿಡುಗಿನ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಈ ವೈಮಾನಿಕ ಪ್ರದರ್ಶನ ನಡೆದಿರಲಿಲ್ಲ. ಕೋವಿಡ್‌ಗೆ ಸಂಬಂಧಿಸಿದ ನಿರ್ಬಂಧಗಳನ್ನು ಸಂಪೂರ್ಣವಾಗಿ ಸಡಿಲಗೊಳಿಸದ ಕಾರಣ, ಇಂದು ಆರಂಭಗೊಂಡ ಷೋಗೆ ಸಾರ್ವಜನಿಕರಿಗೆ ಪ್ರವೇಶ ನೀಡಲಾಗಿಲ್ಲ.

600 ಉದ್ದಿಮೆಗಳು ತಮ್ಮ ಉತ್ಪನ್ನಗಳು ಹಾಗೂ ಸೇವೆಗಳನ್ನು ಈ ಕಾರ್ಯಕ್ರಮದಲ್ಲಿ ಪ್ರದರ್ಶನ ಮಾಡಲಿವೆ. ಬೋಯಿಂಗ್, ಏರ್‌ಬಸ್, ಲಾಕ್‌ಹೀಡ್ ಮಾರ್ಟಿನ್ ಪಾಲ್ಗೊಂಡಿರುವ ಪ್ರಮುಖ ಕಂಪನಿಗಳಾಗಿವೆ. 2020ರಲ್ಲಿ ನಡೆದ ಏರ್ ಷೋನಲ್ಲಿ 930 ಕಂಪನಿಗಳು ಭಾಗವಹಿಸಿದ್ದವು.

ADVERTISEMENT

ಕೋವಿಡ್‌ಗೆ ಸಂಬಂಧಿಸಿದ ತನ್ನ ನೀತಿಗಳ ಕಾರಣದಿಂದಾಗಿ ಚೀನಾದ ಕಂಪನಿಗಳು ಈ ಪ್ರದರ್ಶನದಿಂದ ದೂರ ಉಳಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.