ADVERTISEMENT

ಜೈಲಿನಲ್ಲಿ ದಿನ ಕಳೆಯುತ್ತಿರುವ ಜಾಕೊಬ್‌ ಜುಮಾ

ಏಜೆನ್ಸೀಸ್
Published 8 ಜುಲೈ 2021, 10:40 IST
Last Updated 8 ಜುಲೈ 2021, 10:40 IST
ಜಾಕೊಬ್ ಜುಮಾ
ಜಾಕೊಬ್ ಜುಮಾ   

ಜೋಹಾನ್ಸ್‌ಬರ್ಗ್: ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ವಿಚಾರಣೆಗೆ ಗೈರು ಹಾಜರಾದ ಕಾರಣ 15 ತಿಂಗಳ ಶಿಕ್ಷೆಗೆ ಗುರಿಯಾಗಿರುವ ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜಾಕೊಬ್ ಜುಮಾ ಗುರುವಾರ ಜೈಲಿನಲ್ಲಿ ಮೊದಲ ದಿನ ಕಳೆದರು.

ನ್ಯಾಯಾಲಯವು ಶಿಕ್ಷೆಯ ಆದೇಶ ಹೊರಡಿಸಿದ ನಂತರ, ಅದರಿಂದ ತಪ್ಪಿಸಿಕೊಳ್ಳಲು ಹಲವು ನಾಟಕೀಯ ಬೆಳವಣಿಗೆಗಳು ನಡೆದವು. ಆದರೂ, ಜಾಕೊಬ್‌ ಜೈಲು ಶಿಕ್ಷೆಯಿಂದ ಪಾರಾಗಲು ಸಾಧ್ಯವಾಗಿಲ್ಲ. ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಮಾಜಿ ಅಧ್ಯಕ್ಷರನ್ನು ಜೈಲಿಗೆ ಕಳಿಸಲಾಗಿದೆ.

ಜೈಲು ಶಿಕ್ಷೆಯಿಂದ ಪಾರಾಗಲು ಎಲ್ಲ ರೀತಿಯ ಕಾನೂನು ಮಾರ್ಗಗಳನ್ನು ಜಾಕೊಬ್‌ ಹುಡುಕಿದರು. ಆದರೆ, ಅದು ಯಶಸ್ವಿಯಾಗದ ಕಾರಣ ಕೊನೆಗೆ ಬುಧವಾರ ಮಧ್ಯರಾತ್ರಿಯ ನಂತರ ಜೈಲು ಸೇರಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.