ಕೊಲಂಬೊ: ಈಸ್ಟರ್ ದಿನದಂದು ಶ್ರೀಲಂಕಾದಲ್ಲಿ ಸರಣಿ ಸ್ಫೋಟಗಳನ್ನು ನಡೆಸಲು ನ್ಯಾಷನಲ್ ತೌಹೀದ್ ಜಮಾತ್ ನಾಯಕ ಝಹ್ರಾನ್ ಹಶೀಮ್ ಪ್ರಮುಖ ಪಾತ್ರವಹಿಸಿದ್ದ ಎನ್ನಲಾಗಿದೆ.
ಇಸ್ಲಾಮಿಕ್ ಸ್ಟೇಟ್(ಐಎಸ್) ಮಂಗಳವಾರ ಬಿಡುಗಡೆ ಮಾಡಿದ್ದ ವಿಡಿಯೊದಲ್ಲಿ ಹಶೀಮ್‌ನನ್ನೇ ಪ್ರಮುಖವಾಗಿ ತೋರಿಸಲಾಗಿತ್ತು. ರೈಫಲ್ ಕೊಂಡೊಯ್ಯುತ್ತಿರುವ ಹಶೀಮ್ ಏಳು ದಾಳಿಕೋರರ ನೇತೃತ್ವವಹಿಸಿರುವ ದೃಶ್ಯವಿದೆ. ಶ್ರೀಲಂಕಾದಲ್ಲೂ ಹಶೀಮ್ ಹೆಚ್ಚು ಜನರಿಗೆ ಪರಿಚಯ ಇಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲೂ ಹಶೀಮ್‌ಗೆ ಸಾವಿರಾರು ಫಾಲೋವರ್ಸ್ ಇದ್ದಾರೆ. ಈ ತಾಣಗಳಲ್ಲಿ ಪ್ರಚೋದನಾಕಾರಿ ವಿಷಯಗಳನ್ನು ಈತ ಪೋಸ್ಟ್ ಮಾಡುತ್ತಿದ್ದ.
ಹಲವು ವರ್ಷಗಳಿಂದ ಈತನ ಬಗ್ಗೆ ಶ್ರೀಲಂಕಾದ ಮುಸ್ಲಿಂ ಸಮುದಾಯದ ನಾಯಕರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.