ADVERTISEMENT

ಚೀನಾ: ಕ್ವಿಂಘೈ ಪ್ರಾಂತ್ಯದಲ್ಲಿ ಪ್ರಬಲ ಭೂಕಂಪನ

ಏಜೆನ್ಸೀಸ್
Published 8 ಜನವರಿ 2022, 10:36 IST
Last Updated 8 ಜನವರಿ 2022, 10:36 IST
ಚೀನಾದ ಪಶ್ಚಿಮದಲ್ಲಿರುವ ಕ್ವಿಂಘೈ ‍ಪ್ರಾಂತ್ಯದ ಮೆನ್‌ಯುವಾನ್ ಹುಯಿ ಸ್ವಾಯತ್ತ ಪ್ರದೇಶದಲ್ಲಿ ಶನಿವಾರ ಸಂಭವಿಸಿದ ಭೂಕಂಪನದಿಂದಾಗಿ ಮನೆಯೊಂದರ ಚಾವಣಿ ಹಾನಿಗೊಳಗಾಗಿದೆ –ಎಎಫ್‌ಪಿ ಚಿತ್ರ
ಚೀನಾದ ಪಶ್ಚಿಮದಲ್ಲಿರುವ ಕ್ವಿಂಘೈ ‍ಪ್ರಾಂತ್ಯದ ಮೆನ್‌ಯುವಾನ್ ಹುಯಿ ಸ್ವಾಯತ್ತ ಪ್ರದೇಶದಲ್ಲಿ ಶನಿವಾರ ಸಂಭವಿಸಿದ ಭೂಕಂಪನದಿಂದಾಗಿ ಮನೆಯೊಂದರ ಚಾವಣಿ ಹಾನಿಗೊಳಗಾಗಿದೆ –ಎಎಫ್‌ಪಿ ಚಿತ್ರ   

ಬೀಜಿಂಗ್: ಚೀನಾದ ಪಶ್ಚಿಮದಲ್ಲಿರುವ ಕ್ವಿಂಘೈ ‍ಪ್ರಾಂತ್ಯದ ಮೆನ್‌ಯುವಾನ್ ಹುಯಿ ಸ್ವಾಯತ್ತ ಪ್ರದೇಶದಲ್ಲಿ ಶನಿವಾರ ನಸುಕಿನಲ್ಲಿ ಪ್ರಬಲ ಭೂಕಂಪನ ಸಂಭವಿಸಿದೆ.

ರಿಕ್ಟರ್‌ ಮಾಪಕದಲ್ಲಿ 6.9ರಷ್ಟು ತೀವ್ರತೆ ದಾಖಲಾಗಿದೆ. ಭೀತಿಗೆ ಒಳಗಾದ ಜನರು ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ. ಕೆಲವರಿಗೆ ಗಾಯಗಳಾಗಿದ್ದು, ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲು ಮಾರ್ಗ ಹಾಯ್ದು ಹೋಗಿರುವ ಸುರಂಗಕ್ಕೆ ಹಾನಿಯಾಗಿದೆ. ಹೀಗಾಗಿ ಗನ್ಸು ಪ್ರಾಂತ್ಯದ ಲಾಂಜೌ ಹಾಗೂ ಕ್ಸಿನ್‌ಜಿಯಾಂಗ್‌ ನಡುವೆ ಹೈಸ್ಪೀಡ್‌ ರೈಲು ಸಂಚಾರವನ್ನು ಕೆಲ ಕಾಲ ಸ್ಥಗಿತಗೊಳಿಸಲಾಗಿತ್ತು ಎಂದೂ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.