ADVERTISEMENT

ನ್ಯೂಜಿಲೆಂಡ್‌: ಪ್ರಬಲ ಭೂಕಂಪ–ಸುನಾಮಿ ಎಚ್ಚರಿಕೆ

ಏಜೆನ್ಸೀಸ್
Published 8 ಜನವರಿ 2023, 14:28 IST
Last Updated 8 ಜನವರಿ 2023, 14:28 IST

ವೆಲ್ಲಿಂಗ್ಟನ್‌, ನ್ಯೂಜಿಲೆಂಡ್‌: ವನವಾಟುವಿನ ಪೆಸಿಫಿಕ್ ದ್ವೀಪಸಮೂಹದಲ್ಲಿ ಭಾನುವಾರ ರಿಕ್ಟರ್ ಮಾಪಕದಲ್ಲಿ 7.0 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುನಾಮಿಯ ಅಪಾಯವಿದೆ ಎಂದು ಅಮೆರಿಕದ ಭೂಸರ್ವೇಕ್ಷಣಾ ಇಲಾಖೆ ಎಚ್ಚರಿಕೆ ನೀಡಿದೆ.

ಭೂಕಂಪದ ಕೇಂದ್ರ ಬಿಂದು ಓಲ್ರಿ ಬಂದರಿನಿಂದ 23 ಕಿಲೋಮೀಟರ್ ದೂರದಲ್ಲಿತ್ತು ಹಾಗೂ 27 ಕಿ.ಮೀ. ಆಳದಲ್ಲಿ ಇತ್ತು. ಸುನಾಮಿ ಎದುರಾದರೆ 300 ಕಿ.ಮೀ. ಇರುವ ಕರಾವಳಿಗೆ ಅಪಾಯ ಇದೆ ಎಂದು ತಿಳಿಸಲಾಗಿದೆ. ಸದ್ಯ ಯಾವುದೇ ಸಾವು, ನೋವಿನ ವರದಿಯಾಗಿಲ್ಲ.

ವನವಾಟುವಿನಲ್ಲಿ ಸುಮಾರು 2.80 ಲಕ್ಷ ಜನ ವಾಸಿಸುತ್ತಿದ್ದು, ಭೂಕಂಪ ಹಾಗೂ ಜ್ವಾಲಾಮುಖಿಗಳು ಈ ಭಾಗದಲ್ಲಿ ಸಮಾನ್ಯವಾಗಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.