ADVERTISEMENT

ಪಾಕ್‌ ಆಕ್ರಮಿತ ಕಾಶ್ಮೀರದ ಅಧ್ಯಕ್ಷರಾಗಿ ಸುಲ್ತಾನ್ ಮಹಮೂದ್ ಆಯ್ಕೆ

ಪಿಟಿಐ
Published 17 ಆಗಸ್ಟ್ 2021, 14:27 IST
Last Updated 17 ಆಗಸ್ಟ್ 2021, 14:27 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಇಸ್ಲಾಮಾಬಾದ್‌: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಅಧ್ಯಕ್ಷರಾಗಿ ಸುಲ್ತಾನ್ ಮಹಮೂದ್ ಅವರನ್ನು ಮಂಗಳವಾರ ಆ ಪ್ರದೇಶದ ಶಾಸಕಾಂಗ ಸಭೆ ಆಯ್ಕೆ ಮಾಡಿದೆ.

ಆಡಳಿತಾರೂಢ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಬೆಂಬಲದೊಂದಿಗೆ ಮಹಮೂದ್ ಅವರು ಜುಲೈ 25ರಂದು ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.

ಮಹಮೂದ್ ಅವರು 34 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ, ಜಂಟಿ ವಿರೋಧ ಪಕ್ಷದ ಅಭ್ಯರ್ಥಿ ಮಿಯಾನ್ ಅಬ್ದುಲ್ ವಹೀದ್ 16 ಮತಗಳನ್ನು ಪಡೆದರು. ಇವರು, ಸರ್ದಾರ್ ಮಸೂದ್ ಖಾನ್ ಅವರ ಉತ್ತರಾಧಿಕಾರಿಯಾಗಲಿದ್ದು, ಖಾನ್‌ ಅವರ ಅಧಿಕಾರಾವಧಿ ಇದೇ 24ರಂದು ಕೊನೆಗೊಳ್ಳಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.