ADVERTISEMENT

ಕಾಬೂಲ್‌: ಬಾಂಬ್‌ ಸ್ಫೋಟದಲ್ಲಿ 14 ಮಂದಿ ಸಾವು

ಏಜೆನ್ಸೀಸ್
Published 7 ಆಗಸ್ಟ್ 2019, 14:46 IST
Last Updated 7 ಆಗಸ್ಟ್ 2019, 14:46 IST
ಸ್ಫೋಟದಲ್ಲಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು
ಸ್ಫೋಟದಲ್ಲಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು   

ಕಾಬೂಲ್‌:ಪಶ್ಚಿಮ ಕಾಬೂಲ್‌ನಲ್ಲಿ ಬುಧವಾರ ನಡೆದ ಭೀಕರ ಬಾಂಬ್ ಸ್ಫೋಟದಲ್ಲಿ ಕನಿಷ್ಠ ಹತ್ತು ನಾಗರಿಕರು ಮತ್ತು ನಾಲ್ಕು ಪೊಲೀಸರು ಸೇರಿದಂತೆ 14 ಮಂದಿ ಮೃತರಾಗಿದ್ದಾರೆ.

ಪೊಲೀಸ್ ಕಾಂಪೌಂಡ್‌ ಸಮೀಪವೇ ಈ ಘಟನೆ ನಡೆದಿದ್ದು,145 ಮಂದಿ ಗಾಯಗೊಂಡಿದ್ದಾರೆ.

ಕಾರ್‌ ಬಾಂಬ್‌ ದಾಳಿಯಿಂದ ಈ ಸ್ಫೋಟ ಉಂಟಾಗಿದೆ ಎಂದು ಅಫ್ಗಾನ್‌ ಆಂತರಿಕ ಸಚಿವಾಲಯ ತಿಳಿಸಿದೆ. ಆದರೆ, ದಾಳಿಯ ಹೊಣೆ ಹೊತ್ತಿರುವ ತಾಲಿಬಾನ್‌ ಇದು ಟ್ರಕ್‌ ಬಾಂಬ್‌ ದಾಳಿ ಎಂದು ಹೇಳಿದೆ. ಅಫ್ಗಾನ್‌ ಭದ್ರತಾ ಪಡೆ ಸಿಬ್ಬಂದಿಗಳೂ ಇದು ಟ್ರಕ್‌ ಬಾಂಬ್‌ ಸ್ಫೋಟ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

18 ವರ್ಷಗಳ ಯುದ್ಧಕ್ಕೆ ಅಂತ್ಯ ಹಾಡಲು ಅಮೆರಿಕ ಜತೆ ಶಾಂತಿ ಮಾತುಕತೆ ನಡೆಸುತ್ತಿರುವ ತಾಲಿಬಾನ್‌, ಆಗಾಗೆ ಇಂತಹ ದಾಳಿ ಮುಂದುವರಿಸಿದೆ.ಕಳೆದ ಒಂದು ತಿಂಗಳಿನಿಂದ ಉಗ್ರರು ನಡೆಸುತ್ತಿರುವ ದಾಳಿಯಲ್ಲಿ 1,500 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.