ADVERTISEMENT

ಇಸ್ರೇಲ್‌ನ ಟೆಲ್‌ ಅವಿವ್‌ ಅತ್ಯಂತ ದುಬಾರಿ ನಗರ

ಏಜೆನ್ಸೀಸ್
Published 2 ಡಿಸೆಂಬರ್ 2021, 16:36 IST
Last Updated 2 ಡಿಸೆಂಬರ್ 2021, 16:36 IST
ಟೆಲ್‌ ಅವಿವ್‌ ನಗರದ ನೋಟ
ಟೆಲ್‌ ಅವಿವ್‌ ನಗರದ ನೋಟ   

ಟೆಲ್‌ ಅವಿವ್‌: ಇಸ್ರೇಲ್‌ನ ಟೆಲ್‌ ಅವಿವ್‌ ನಗರವು ವಾಸಿಸಲು ಅತ್ಯಂತ ದುಬಾರಿ ನಗರವಾಗಿ ಹೊರಹೊಮ್ಮಿದೆ ಎಂದು ಎಕನಾಮಿಸ್ಟ್‌ ಇಂಟೆಲಿಜೆನ್ಸ್ ಯುನಿಟ್‌ (ಇಐಯು) ತಿಳಿಸಿದೆ.

ಈ ಹಿಂದೆ ಜಗತ್ತಿನ ಐದನೇ ದುಬಾರಿ ನಗರವಾಗಿದ್ದ ಟೆಲ್‌ ಅವಿವ್‌, ಈ ಬಾರಿ ಪ್ಯಾರಿಸ್‌ ಮತ್ತು ಸಿಂಗಪುರದಂತಹ ದುಬಾರಿ ನಗರಗಳನ್ನೂ ಮೀರಿ ಮೊದಲ ಸ್ಥಾನಕ್ಕೇರಿದೆ ಎಂದು ಅದು ಹೇಳಿದೆ.

ಇಐಯು ಬುಧವಾರ ಪ್ರಕಟಿಸಿರುವ ವರದಿಯಲ್ಲಿ ನಗರದಲ್ಲಿ ದಿನಸಿ ಮತ್ತು ಸಾರಿಗೆ ವೆಚ್ಚಗಳ ಏರಿಕೆ ಆಗಿರುವುದನ್ನು ಉಲ್ಲೇಖಿಸಿದೆ. ನಗರದಲ್ಲಿ ಬಾಡಿಗೆಯೂ ದುಬಾರಿ ಆಗಿದೆ. ಬೆಲೆ ಏರಿಕೆಯಿಂದಾಗಿ ಇಲ್ಲಿನ ನಿವಾಸಿಗಳ ವೆಚ್ಚಗಳು ದುಪ್ಪಟ್ಟು ಆಗಿವೆ.

ADVERTISEMENT

ಟೆಲ್ ಅವಿವ್, ಇಸ್ರೇಲ್‌ನ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರ. ಇದು ಅಭಿವೃದ್ಧಿ ಹೊಂದುತ್ತಿರುವ ಹೈಟೆಕ್ ನಗರವೂ ಹೌದು. ಇಲ್ಲಿ ವಿಶ್ವ ದರ್ಜೆಯ ರೆಸ್ಟೋರೆಂಟ್‌ಗಳು ಮತ್ತು ಹೊಸ ಐಷಾರಾಮಿ ಹೊಟೇಲ್‌ಗಳು ಇವೆ.

ದಶಕದ ಹಿಂದೆ ಹೆಚ್ಚುತ್ತಿದ್ದ ಜೀವನ ನಿರ್ವಹಣಾ ವೆಚ್ಚವನ್ನು ತಗ್ಗಿಸುವಂತೆ ಆಗ್ರಹಿಸಿ ಲಕ್ಷಾಂತರ ಇಸ್ರೇಲಿಗಳು ಬೀದಿಗಿಳಿದು ಪ್ರತಿಭಟಿಸಿದ್ದರು. ಇಲ್ಲಿನ ಸರ್ಕಾರಗಳು ದೇಶದ ಇತರ ಭಾಗಗಳಲ್ಲಿ ಉತ್ತಮ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಹೆಣಗಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.