ADVERTISEMENT

ಈಕ್ವೆಡಾರ್ ಜೈಲಿನಲ್ಲಿ ಕೈದಿಗಳ ಘರ್ಷಣೆ: 10 ಮಂದಿ ಸಾವು

ಪಿಟಿಐ
Published 19 ನವೆಂಬರ್ 2022, 2:08 IST
Last Updated 19 ನವೆಂಬರ್ 2022, 2:08 IST
   

ಕ್ವಿಟೊ: ಈಕ್ವೆಡಾರ್‌ನ ರಾಜಧಾನಿ ಕ್ವಿಟೊ ಜೈಲಿನಲ್ಲಿ ಶುಕ್ರವಾರ ಕೈದಿಗಳ ನಡುವೆ ಸಂಭವಿಸಿದ ಘರ್ಷಣೆಯಲ್ಲಿ 10 ಮಂದಿ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂವರು ಕುಖ್ಯಾತ ಅಪರಾಧಿಗಳನ್ನು ಹೆಚ್ಚಿನ ಭದ್ರತಾ ಸೆಲ್‌ಗೆ ಸ್ಥಳಾಂತರಿಸುವ ಸರ್ಕಾರದ ನಿರ್ಧಾರದ ಪರಿಣಾಮವಾಗಿ ಈ ಘರ್ಷಣೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ವಿಟೊ ಜೈಲಿನಲ್ಲಿನ ಪ್ರಕ್ಷುಬ್ಧ ವಾತಾವರಣವು ದೇಶಕ್ಕೆ ದೊಡ್ಡ ಸವಾಲಾಗಿದೆ,

ಈ ಮಧ್ಯೆ, ಪೊಲೀಸರು ಮತ್ತು ಸೇನೆ ಜೈಲನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ಸಂಘಟಿತ ಅಪರಾಧಗಳನ್ನು ಎದುರಿಸಲು ದೃಢ ಮತ್ತು ನಿರಂತರವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಸರ್ಕಾರ ಹೇಳಿದೆ.

ADVERTISEMENT

ಕೈದಿಗಳ ಮೃತದೇಹಗಳನ್ನು ಹೊರತೆಗೆಯಲಾಗುತ್ತಿದೆ ಎಂದು ತನಿಖಾ ಕಚೇರಿ ಟ್ವೀಟ್ ಮಾಡಿದೆ.

ಈಕ್ವೆಡಾರ್‌ನ ಕಾರಾಗೃಹಗಳಲ್ಲಿ, ವಿಶೇಷವಾಗಿ ಗುವಾಕ್ವಿಲ್ ಲಿಟೋರಲ್ ಪೆನಿಟೆನ್ಷಿಯರಿಯಲ್ಲಿ ಆಗಾಗ್ಗೆ ಗಲಭೆಗಳು ಸಂಭವಿಸುತ್ತಲೇ ಇವೆ. ಬಂದರು ನಗರವಾದ ಗುವಾಕ್ವಿಲ್‌ನಲ್ಲಿರುವ ಜೈಲಿನಲ್ಲಿ ತಿಂಗಳ ಹಿಂದೆ ನಡೆದ ಘರ್ಷಣೆಯಲ್ಲಿ 13 ಕೈದಿಗಳು ಹತ್ಯೆಯಾಗಿದ್ದರು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ 126 ಕೈದಿಗಳನ್ನು ಕೊಲ್ಲಲಾಗಿತ್ತು.

ಸತತ ಗಲಭೆಗಳಿಂದಾಗಿ ಅಧ್ಯಕ್ಷ ಗಿಲ್ಲೆರ್ಮೊ ಲಾಸ್ಸೊ ಅವರ ಸರ್ಕಾರ ಕನಿಷ್ಠ 10 ಗ್ಯಾಂಗ್‌ ಲೀಡರ್‌ಗಳನ್ನು ಬೇರೆಡೆಗೆ ಸ್ಥಳಾಂತರಿಸಲು ನಿರ್ಧರಿಸಿತ್ತು.

ಈಕ್ವೆಡಾರ್‌ನ ಜೈಲು ವ್ಯವಸ್ಥೆಯಲ್ಲಿ ಸುಮಾರು 30,000 ಕೈದಿಗಳನ್ನು ಇಡುವಷ್ಟು ಸ್ಥಳವಿದೆ. ಆದರೆ, ಕಳೆದ ತಿಂಗಳವರೆಗೆ ಇಲ್ಲಿನ 53 ಕಾರಾಗೃಹಗಳಲ್ಲಿ ಸುಮಾರು 35,000 ಕೈದಿಗಳಿದ್ದರು. ಕಳೆದ ವರ್ಷ ಇತರ ಕೈದಿಗಳಿಂದ 316 ಕೈದಿಗಳು ಕೊಲ್ಲಲ್ಪಟ್ಟಿದ್ದು,. ಈ ವರ್ಷ 130 ಮಂದಿ ಹತ್ಯೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.