ADVERTISEMENT

ಥಾಯ್ಲೆಂಡ್‌ ಸಂಸತ್ತು ವಿಸರ್ಜನೆ: ಮೇನಲ್ಲಿ ಚುನಾವಣೆ

ಏಜೆನ್ಸೀಸ್
Published 20 ಮಾರ್ಚ್ 2023, 11:50 IST
Last Updated 20 ಮಾರ್ಚ್ 2023, 11:50 IST
.
.   

ಬ್ಯಾಂಕಾಕ್‌: ಥಾಯ್ಲೆಂಟ್‌ ಸಂಸತ್ತು ಸೋಮವಾರ ವಿಸರ್ಜನೆಗೊಂಡಿದ್ದು, ಮೇ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆಗೆ ವೇದಿಕೆ ಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ದೇಶದ ರಾಜಕೀಯದಲ್ಲಿ ಮಿಲಿಟರಿ ಪ್ರಭಾವ ತಗ್ಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಜನಪ್ರತಿನಿಧಿಗಳ ಸಭೆಯ ನಾಲ್ಕು ವರ್ಷದ ಅವಧಿ ಮುಗಿಯುವ ಕೆಲವೇ ದಿನಗಳ ಮೊದಲು ಸಂಸತ್ತು ವಿಸರ್ಜನೆಗೊಂಡಿದೆ.

ಚುನಾವಣೆಯು ಕೋಟ್ಯಧಿಪತಿ ತಕ್ಷಸಿನ್ ಶಿನವತ್ರಾ ಅವರ ಬೆಂಬಲ ಪಡೆದ ವಿರೋಧ ಪಕ್ಷವಾದ ಫ್ಯೂ ಥಾಯ್ ಪಕ್ಷದ ಪರವಾಗಿದೆ.

ADVERTISEMENT

ಜನಾಭಿಪ್ರಾಯದ ಪ್ರಕಾರ ಚುನಾವಣೆಯಲ್ಲಿ ಫ್ಯೂ ಥಾಯ್‌ ಅಭ್ಯರ್ಥಿ, ತಕ್ಷಸಿನ್‌ ಪುತ್ರಿ ಪಯಿಟೊಂಗ್‌ತಾರ್ನ್‌ ಶಿನವತ್ರಾ ಅವರ ಹೆಸರು ಮೂಂಚೂಣಿಯಲ್ಲಿದೆ.

ಒಂದು ವೇಳೆ ಅವರು ಆಯ್ಕೆಯಾದರೆ, ಎರಡು ದಶಕಗಳಲ್ಲಿ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಶಿನವತ್ರಾ ಕುಟುಂಬದ ಮೂರನೇ ಸದಸ್ಯರಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.