ADVERTISEMENT

ಪಾಕಿಸ್ತಾನದಲ್ಲಿ ಕಚ್ಚಾ ಬಾಂಬ್‌ ಸ್ಫೋಟ: ಮೂವರು ಪೊಲೀಸರ ಸಾವು

ಪಿಟಿಐ
Published 15 ಏಪ್ರಿಲ್ 2025, 12:56 IST
Last Updated 15 ಏಪ್ರಿಲ್ 2025, 12:56 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಕರಾಚಿ: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಮಾಸ್ತುಂಗ್ ಜಿಲ್ಲೆಯ ದಶ್ಟ್‌ ಪ್ರದೇಶದಲ್ಲಿ ಮಂಗಳವಾರ ಪೊಲೀಸ್ ಪಡೆ ವಾಹನವನ್ನು ಕಚ್ಚಾ ಬಾಂಬ್ (ಐಇಡಿ) ಬಳಸಿ ಸ್ಫೋಟಿಸಿದ ಪರಿಣಾಮ ಮೂವರು ಪೊಲೀಸರು ಮೃತಪಟ್ಟು, 18 ಮಂದಿ ಗಾಯಗೊಂಡಿದ್ದಾರೆ.

ADVERTISEMENT

ಬಲೂಚ್ ಯಕ್ಜೆಹ್ತಿ ಕೌನ್ಸಿಲ್‌ ನಾಯಕರ ಬಂಧನ ಖಂಡಿಸಿ ಬಲೂಚಿಸ್ತಾನ ನ್ಯಾಷನಲ್ ಪಾರ್ಟಿ ನಡೆಸುತ್ತಿದ್ದ ಪ್ರತಿಭಟನೆಯ ಬಂದೋಬಸ್ತ್‌ಗಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು ಎಂದು ಸ್ಥಳೀಯ ಸರ್ಕಾರದ ವಕ್ತಾರ ಶಹೀದ್ ರಿಂದ್‌ ತಿಳಿಸಿದ್ದಾರೆ.

10 ಮಂದಿ ಸಾವು: ನೈರುತ್ಯ ಪಾಕಿಸ್ತಾನದ ಕಾರಕ್‌ ಜಿಲ್ಲೆಯಲ್ಲಿ, ರೈಲು ಬೋಗಿಯೊಂದಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ,  10 ‍ಪ್ರಯಾಣಿಕರು ಮೃತಪಟ್ಟು, ಎಂಟು ಮಂದಿ ಗಾಯಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.