ADVERTISEMENT

ಕೊರೊನಾ ವೈರಸ್ ಸೋಂಕಿಗೆ ಇರಾನ್‌ನಲ್ಲಿ ಮತ್ತೆ ಮೂವರು ಬಲಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 10:48 IST
Last Updated 25 ಫೆಬ್ರುವರಿ 2020, 10:48 IST
   

ಟೆಹರಾನ್‌:ಕೊರೊನಾವೈರಸ್‌ ಸೋಂಕಿಗೆ ಇರಾನ್‌ನಲ್ಲಿ ಮತ್ತೆ 3 ಜನರುಮೃತಪಟ್ಟಿದ್ದಾರೆಎಂದು ಇಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.ಕೊರೊನಾವೈರಸ್‌ಗೆ ಚೀನಾದಬಳಿಕಅತೀಹೆಚ್ಚು ಜನರು ಇರಾನ್‌ನಲ್ಲಿಮೃತರಾಗಿದ್ದಾರೆ

ಈವರೆಗೆಇರಾನ್‌ನಲ್ಲಿಕೊರೊನಾವೈರಸ್ಸೋಂಕಿಗೆ ಒಟ್ಟು 15 ಜನರು ಮೃತಪಟ್ಟಿದ್ದಾರೆ.

ಕೊವಿಡ್‌–19 ವೈರಸ್‌ಗೆಕಳೆದ ಬುಧವಾರ ಕೊಮ್ಪ್ರಾಂತ್ಯದಲ್ಲಿ ಇಬ್ಬರು ಮೃತಪಟ್ಟಿದ್ದರು. ಇಲ್ಲಿನಸರ್ಕಾರಪರಿಸ್ಥಿತಿಯನ್ನು ಹತೋಟಿಗೆ ತರಲು ತೀವ್ರಪ್ರಯತ್ನ ಮಾಡುತ್ತಿದೆ ಎಂದು ಮಾಧ್ಯಮಗಳು ಹೇಳಿವೆ.

ADVERTISEMENT

ಮೃತರಲ್ಲಿ ಇಬ್ಬರುಮರ್ಕಝಿಪ್ರಾಂತ್ಯದವರಾಗಿದ್ದು, ಮತ್ತೊಬ್ಬಅಲಿಬೊಜ್‌ನವರಾಗಿದ್ದಾರೆ.

ಮೃತರಲ್ಲಿ 87 ವಯಸ್ಸಿನಮಹಿಳೆ ಇದ್ದು ಅವರು ಕಿಡ್ನಿ, ಲಿವರ್‌ ಮತ್ತು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಯಿಂದಾಗಿಆಸ್ಪತ್ರೆಗೆದಾಖಲಿಸಲಾಗಿತ್ತು.ಮೃತರಲ್ಲಿ ಇನ್ನೊಬ್ಬರು 82 ವಯಸ್ಸಿನವರಾಗಿದ್ದು ಅವರಿಗೆ ರಕ್ತ ಮತ್ತು ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದರು ಎಂದುಇಲ್ಲಿನ ಸ್ಥಳೀಯ ವೈದ್ಯಕೀಯ ವಿಶ್ವವಿದ್ಯಾಲಯದ ಮುಖ್ಯಸ್ಥ ಅಬ್ಬಾಸ್‌ನಿಕ್ರಾವೇಶ್ಹೇಳಿದ್ದಾರೆ.

ಈವರೆಗೆಇರಾನ್‌ನ ಏಳು ನಗರಗಳಲ್ಲಿ ಮಾರಕಕೊರೊನಾಸೋಂಕು ಪತ್ತೆಯಾಗಿದೆಎಂದು ಅವರು ಹೇಳಿದ್ದಾರೆ.

ಆಫ್ಘನ್‌ಮೂಲದ 78 ವಯಸ್ಸಿನಮಹಿಳೆಕೊರೊನಾವೈರಸ್ಸೋಂಕಿನಿಂದ ಬಳಲುತ್ತಿದ್ದು ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.ಕೊರೊನಾಪೀಡಿತರ ಸಂಖ್ಯೆ 61ಕ್ಕೆ ಏರಿದೆ ಎಂದು ಇಲ್ಲಿನಸರ್ಕಾರದೃಢಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.