ADVERTISEMENT

ರೈಲ್ವೆ ಹಳಿಯಲ್ಲಿ ಬಾಂಬ್‌ ಸ್ಫೋಟ: ನಾಲ್ವರ ಸಾವು

ಪಿಟಿಐ
Published 17 ಮಾರ್ಚ್ 2019, 16:56 IST
Last Updated 17 ಮಾರ್ಚ್ 2019, 16:56 IST

ಕರಾಚಿ: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಭಾನುವಾರ ರೈಲ್ವೆ ಹಳಿಯಲ್ಲಿ ಸುಧಾರಿತ ಬಾಂಬ್ ಸ್ಫೋಟಗೊಂಡ ಪರಿಣಾಮ ಮಹಿಳೆ, ಆಕೆಯ ಮಗಳು ಸೇರಿ ನಾಲ್ವರು ಸಾವನ್ನಪ್ಪಿದ್ದು, ಎಂಟು ಮಂದಿಗಾಯಗೊಂಡಿದ್ದಾರೆ.

ರಾವಲ್ಪಿಂಡಿಯಿಂದ ಕ್ವೆಟ್ಟಾಕ್ಕೆ ಬರುತ್ತಿದ್ದ ’ಜಾಪರ್‌ ಎಕ್ಸ್‌ಪ್ರೆಸ್‌‘ ರೈಲು ಗುರಿಯಾಗಿಸಿಕೊಂಡು ಬಲೂಚಿಸ್ತಾನದ ಡೇರಾ ಮುರಾದ್‌ ಜಮಾಲಿ ಬಳಿ ಬಾಂಬ್‌ ಇಡಲಾಗಿತ್ತು.‌

’ಡೇರಾ ಮುರಾದ್‌ ಜಮಾಲಿ ಬಳಿ ರೈಲು ಬರುತ್ತಿದ್ದಂತೆ ಬಾಂಬ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಎಂಟು ಮಂದಿ ಗಾಯಗೊಂಡಿದ್ದು, ಐದು ಬೋಗಿಗಳಿಗೆ ಹಾನಿಯಾಗಿದೆ‘ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಗಾಯಗೊಂಡವರನ್ನು ಹತ್ತಿರದ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರೈಲ್ವೆ ಸಚಿವ ಶೇಕ್‌ ರಶೀದ್‌ ಅಹಮದ್ ಅವರು ಘಟನೆ ಖಂಡಿಸಿದ್ದು, ಹಳಿ ರಿಪೇರಿಗೆ ಆದೇಶ ನೀಡಲಾಗಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.