ADVERTISEMENT

ಇಂದು ಟ್ರಂಪ್– ಬೈಡನ್ ಮುಖಾಮುಖಿ

ಅಮೆರಿಕ ಅಧ್ಯಕ್ಷೀಯ ಚುನಾವಣೆ; ಅಭ್ಯರ್ಥಿಗಳ ಸಂವಾದ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 8:08 IST
Last Updated 28 ಸೆಪ್ಟೆಂಬರ್ 2020, 8:08 IST
ಜೊ ಬೈಡೆನ್ – ಡೊನಾಲ್ಡ್ ಟ್ರಂಪ್
ಜೊ ಬೈಡೆನ್ – ಡೊನಾಲ್ಡ್ ಟ್ರಂಪ್   

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣಾ ಕಣ ರಂಗೇರುತ್ತಿದ್ದು, ಚುನಾವಣಾ ಪ್ರಚಾರದ ಭಾಗವಾಗಿ ಮಂಗಳವಾರ (ಸೆ.29) ನಡೆಯಲಿರುವ ಬಹಿರಂಗ ಚರ್ಚೆಯಲ್ಲಿ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿಗಳಾದ ಡೊನಾಲ್ಡ್ ಟ್ರಂಪ್ ಮತ್ತು ಜೋ ಬೈಡನ್‌ ಮುಖಾಮುಖಿಯಾಗುವರು.

ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ. ಬೈಡನ್‌ ಅವರು ಡೆಮಾಕ್ರಟಿಕ್ ಪಕ್ಷದ ಹುರಿಯಾಳು.

ಚುನಾವಣೆಗೂ ಮುನ್ನ ಮೂರು ಬಾರಿ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿಗಳು ಮತ್ತು ಸಾರ್ವಜನಿಕರ ನಡುವೆ ಸಂವಾದ ನಡೆಯುವುದು. ಮಂಗಳವಾರ ನಡೆಯುತ್ತಿರುವುದು ಮೊದಲ ಸಭೆ. ಉಳಿದ ಸಭೆಗಳು ಅಕ್ಟೋಬರ್ 15ರಂದು ಫ್ಲಾರಿಡಾದ ಮಿಯಾಮಿಯಲ್ಲಿ ಮತ್ತು ಅಕ್ಟೋಬರ್ 22ರಂದು ನಾಶ್ವಿಲ್ಲೆಯಲ್ಲಿ ನಡೆಯಲಿವೆ.

ADVERTISEMENT

ಮಂಗಳವಾರ ನಡೆಯುವ ಚರ್ಚೆಯಲ್ಲಿ ಉಭಯ ಪಕ್ಷಗಳ ಅಭ್ಯರ್ಥಿಗಳು ತಮ್ಮ ತಮ್ಮ ರಾಜಕೀಯ ಪಯಣ, ದೇಶದ ಆರ್ಥಿಕತೆ, ವರ್ಣಭೇದ ನೀತಿ ಮತ್ತು ಹಿಂಸಾಚಾರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ. ಸಭಿಕರ ಪ್ರಶ್ನೆಗಳಿಗೂ ಉತ್ತರಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.