ADVERTISEMENT

ವಾಗ್ದಂಡನೆ: ಟ್ರಂಪ್‌ ಪರ ತಂಡದಿಂದ ಹೊರನಡೆದ ಇಬ್ಬರು ವಕೀಲರು

ಏಜೆನ್ಸೀಸ್
Published 31 ಜನವರಿ 2021, 6:16 IST
Last Updated 31 ಜನವರಿ 2021, 6:16 IST
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್   

ವಾಷಿಂಗ್ಟನ್‌: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪರ ವಕೀಲರ ತಂಡದಿಂದ ಇಬ್ಬರು ವಕೀಲರು ಹೊರನಡೆದಿದ್ದಾರೆ.

ಟ್ರಂಪ್ ವಿರುದ್ಧದ ವಾಗ್ದಂಡನೆ ನಿರ್ಣಯಕ್ಕೆ ಸಂಬಂಧಿಸಿದಂತೆ ಫೆ.8ರಂದು ವಿಚಾರಣೆ ಆರಂಭವಾಗಲಿದೆ. ಹೀಗಾಗಿ ಟ್ರಂಪ್‌ ಅವರು ತಮ್ಮ ಪರ ವಾದ ಮಂಡನೆಗೆ ವಕೀಲರ ಹೊಸ ತಂಡ ಕಟ್ಟಬೇಕಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸೌತ್‌ ಕ್ಯಾರೋಲಿನಾ ಮೂಲದ ಬುಚ್‌ ಬೋವರ್ಸ್‌ ಹಾಗೂ ದೇಬೋರಾ ಬಾರ್ಬಿಯರ್, ಟ್ರಂಪ್‌ ಪರ ತಂಡದಿಂದ ಹೊರ ನಡೆದಿರುವ ವಕೀಲರು.

ADVERTISEMENT

ಕ್ಯಾಪಿಟಲ್‌ ಹಿಲ್‌ ಮೇಲೆ ಟ್ರಂಪ್‌ ಬೆಂಬಲಿಗರು ದಾಳಿ ನಡೆಸಿ, ಹಿಂಸಾಚಾರಕ್ಕೆ ಕಾರಣರಾಗಿದ್ದರು. ಈ ಸಂದರ್ಭದಲ್ಲಿ ಪೊಲೀಸ್‌ ಅಧಿಕಾರಿ ಸೇರಿ ಐವರು ಮೃತಪಟ್ಟಿದ್ದರು. ಈ ಹಿಂಸಾಚಾರಕ್ಕೆ ಟ್ರಂಪ್‌ ಅವರ ಪ್ರಚೋದನೆಯೇ ಕಾರಣ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರ ವಿರುದ್ಧ ವಾಗ್ದಂಡನೆ ನಿರ್ಣಯ ಮಂಡನೆ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.