ADVERTISEMENT

ವಾರದೊಳಗೆ ಪ್ರತಿಸುಂಕ ನೀತಿ ಕುರಿತು ಪತ್ರ: ಟ್ರಂಪ್‌

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 16:32 IST
Last Updated 12 ಜೂನ್ 2025, 16:32 IST
ಟ್ರಂಪ್‌
ಟ್ರಂಪ್‌   

ವಾಷಿಂಗ್ಟನ್‌: ಪ್ರತಿಸುಂಕ ನಿರ್ಧಾರಕ್ಕೆ ಸಂಬಂಧಿಸಿದಂತೆ ಇನ್ನು ಒಂದು ಅಥವಾ ಎರಡು ವಾರಗಳ ಒಳಗೆ ತಮ್ಮ ವ್ಯಾಪಾರ ಪಾಲುದಾರ ರಾಷ್ಟ್ರಗಳಿಗೆ ಏಕಪಕ್ಷೀಯ ಪತ್ರ ಬರೆಯುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. 

ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳ ಮೇಲೆ ಭಾರಿ ಪ್ರಮಾಣದ ಪ್ರತಿಸುಂಕ ವಿಧಿಸಿ, ಅದರ ಅನುಷ್ಠಾನಕ್ಕೆ ಜುಲೈ 9ರವರೆಗೆ ಟ್ರಂಪ್‌ ಗಡುವು ನೀಡಿದ್ದರು.

ಗಡುವು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ತಾವೇ ಏಕಪಕ್ಷೀಯವಾಗಿ ‍ಪ್ರತಿಸುಂಕದ ‍ಪ್ರಮಾಣದ ಒಪ್ಪಂದಕ್ಕೆ ಸಂಬಂಧಿಸಿದಂತೆ ಪತ್ರ ಬರೆಯುವುದಾಗಿ ಕೆನಡಿ ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. 

ADVERTISEMENT

ಪ್ರತಿಸುಂಕ ಸಂಬಂಧಿಸಿದಂತೆ ಯಾವ ರಾಷ್ಟ್ರಗಳ ಜತೆಗೆ ಸೌಹಾರ್ದಯುತ ಮಾತುಕತೆ ನಡೆದಿದೆಯೋ ಅಂಥ ರಾಷ್ಟ್ರಗಳಿಗೆ ಮತ್ತಷ್ಟು ಗಡುವು ವಿಸ್ತರಿಸುವ ಸಾಧ್ಯತೆ ಇದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಸ್ಕಾಟ್‌ ಬೆಸೆಂಟ್‌ ಬುಧವಾರ ಹೇಳಿದ್ದರು. ಅದರ ಬೆನ್ನಲ್ಲೇ ಟ್ರಂಪ್‌ ಮೇಲ್ಕಂಡ ಹೇಳಿಕೆ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.