ADVERTISEMENT

ಟರ್ಕಿ ಭೂಕಂಪದಲ್ಲಿ 8 ದಿನಗಳ ನಂತರ ಪವಾಡಸದೃಶವಾಗಿ ಬದುಕಿ ಬಂದ ಮೂವರು!

ಐಎಎನ್ಎಸ್
Published 14 ಫೆಬ್ರುವರಿ 2023, 14:22 IST
Last Updated 14 ಫೆಬ್ರುವರಿ 2023, 14:22 IST
ಕಹ್ರಾಮನ್‌ಮ್ಮಾರಸ್ ನ ಭೂಕಂಪದ ಅವಶೇಷಗಳಡಿ ಕಣ್ಣೀರು ಹಾಕುತ್ತಿರುವ ಕುಟುಂಬ– ಚಿತ್ರ ರಾಯಿಟರ್ಸ್
ಕಹ್ರಾಮನ್‌ಮ್ಮಾರಸ್ ನ ಭೂಕಂಪದ ಅವಶೇಷಗಳಡಿ ಕಣ್ಣೀರು ಹಾಕುತ್ತಿರುವ ಕುಟುಂಬ– ಚಿತ್ರ ರಾಯಿಟರ್ಸ್   

ಅಂಕಾರಾ: ಟರ್ಕಿಯಲ್ಲಿ ಸಂಭವಿಸಿರುವ ಭೀಕರ ಭೂಕಂಪದಿಂದ ಅವಶೇಷಗಳಡಿ ಸಿಲುಕಿದ್ದ ಮೂವರು 8 ದಿನಗಳ ನಂತರ ಬದುಕಿ ಬಂದಿರುವ ಪವಾಡಸದೃಶ ರೀತಿಯ ಘಟನೆ ನಡೆದಿದೆ.

ಮೊಹಮ್ಮದ್ ಏನಿನಾರ್ (17) ಬಕಿ ಏನಿನಾರ್ (16) ಎಂಬ ಇಬ್ಬರು ಸಹೋದರರು ಹಾಗೂ ಮೊಹಮ್ಮದ್ ಕಾಫೀರ್ ಸೆಟೆನ್ (18) ಎಂಬವರು ಭೂಕಂಪದ ಅವಶೇಷಗಳಡಿ ಸಿಲುಕಿದ 198 ಗಂಟೆಗಳ ನಂತರವೂ ಬದುಕಿ ಬಂದಿದ್ದಾರೆ. ಟರ್ಕಿ ಸೇನೆಯ ಪರಿಹಾರ ಕಾರ್ಯಾಚರಣೆ ತಂಡ ಅವರನ್ನು ರಕ್ಷಿಸಿದೆ.

ಭಾರೀ ಭೂಕಂಪ ಸಂಭವಿಸಿರುವ ಕಹ್ರಾಮನ್‌ಮ್ಮಾರಸ್ ಎಂಬಲ್ಲಿ ಈ ಘಟನೆ ನಡೆದಿದೆ. ಫೆಬ್ರವರಿ 6 ರಂದು ಟರ್ಕಿ, ಸಿರಿಯಾದಲ್ಲಿ ಎರಡು ಪ್ರಬಲ ಭೂಕಂಪನ ಸಂಭವಿಸಿತ್ತು.

ADVERTISEMENT

ಭೂಕಂಪದ ಸಂತ್ರಸ್ತರ ಆಕ್ರಂದನ ಟರ್ಕಿ ಮತ್ತು ಸಿರಿಯಾದಲ್ಲಿ ಮುಗಿಲು ಮುಟ್ಟಿದೆ. ಸುಮಾರು 80 ಸಾವಿರ ಗಾಯಾಳುಗಳನ್ನು ಅಂಕಾರಾ ಮತ್ತು ಇಸ್ತಾಂಬುಲ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಭೂಕಂಪದಿಂದ ಇದುವರೆಗೆ ಟರ್ಕಿ ಮತ್ತು ಸಿರಿಯಾದಲ್ಲಿ 31,643 ಜನ ಮೃತಪಟ್ಟಿದ್ದಾರೆ. 1.3 ಕೋಟಿ ಜನ ನಿರಾಶ್ರಿತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.