ADVERTISEMENT

ಅಫ್ಗಾನಿಸ್ತಾನದಲ್ಲಿ ಅವಳಿ ಭೂಕಂಪ: 22 ಸಾವು

ಏಜೆನ್ಸೀಸ್
Published 18 ಜನವರಿ 2022, 11:54 IST
Last Updated 18 ಜನವರಿ 2022, 11:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾಬೂಲ್‌: ಅಫ್ಗಾನಿಸ್ತಾನ ಪಶ್ಚಿಮ ಭಾಗದ ಬಗ್ದೀಸ್‌ ಪ್ರಾಂತ್ಯದ ತುರ್ಕ್ಮೇನಿಸ್ತಾನ ಗಡಿ ಭಾಗದಲ್ಲಿ ಸೋಮವಾರ ಸಂಜೆ ಅವಳಿ ಭೂಕಂಪಗಳು ಸಂಭವಿಸಿದ್ದು, ಕನಿಷ್ಠ 22 ಮಂದಿ ಮೃತಪಟ್ಟಿದ್ದಾರೆ.

ಅಫ್ಗಾನಿಸ್ತಾನದ ಅತ್ಯಂತ ಹಿಂದುಳಿದ ಪ್ರದೇಶದಲ್ಲಿ ಈ ಕಂಪನ ಸಂಭವಿಸಿದ್ದು, ಒಂದು ಕಂಪನದ ತೀವ್ರತೆ ರಿಕ್ಟರ್‌ ಮಾಪಕದಲ್ಲಿ 5.3ರಷ್ಟು ಮತ್ತು ಇನ್ನೊಂದು ಕಂಪನದ ತೀವ್ರತೆ 4.9ರಷ್ಟಿತ್ತು. ದುರ್ಗಮ ಪ್ರದೇಶಗಳಲ್ಲಿ ಕುಸಿದು ಬಿದ್ದ ಮನೆಗಳ ಅಡಿಯಿಂದ ಮೃತದೇಹಗಳನ್ನು ಹೊರತೆಗೆಯುವ ಕಾರ್ಯ ನಿಧಾನವಾಗಿ ನಡೆಯುತ್ತಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಆತಂಕ ಇದೆ.

‘ಭೂಕಂಪದಲ್ಲಿ ಹಲವಾರು ಮನೆಗಳು ಕುಸಿದಿವೆ, ಬದುಕುಳಿದ ಜನರು ಭಯದಿಂದ ಮನೆ ತೊರೆದು ಓಡಿಹೋಗಿದ್ದಾರೆ’ ಎಂದು ಪ್ರಾಂತ್ಯದ ಸಂಸ್ಕೃತಿ ಮತ್ತು ವಾರ್ತಾ ಇಲಾಖೆಯ ಮುಖ್ಯಸ್ಥ ಬಸ್‌ ಮಹಮ್ಮದ್ ಸಾರ್ವರಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.