ADVERTISEMENT

ಟ್ವಿಟರ್‌ನ ಭಾರತದ ಮುಖ್ಯಸ್ಥ ಮನೀಶ್‌ ಮಹೇಶ್ವರಿಗೆ ಅಮೆರಿಕದಲ್ಲಿ ಉನ್ನತ ಹುದ್ದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಆಗಸ್ಟ್ 2021, 15:02 IST
Last Updated 13 ಆಗಸ್ಟ್ 2021, 15:02 IST
ಮನೀಶ್‌ ಮಹೇಶ್ವರಿ
ಮನೀಶ್‌ ಮಹೇಶ್ವರಿ   

ನ್ಯೂಯಾರ್ಕ್‌: ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಮನೀಶ್‌ ಮಹೇಶ್ವರಿಗೆ ಅಮೆರಿಕದಲ್ಲಿ ಉನ್ನತ ಹುದ್ದೆಯ ಜವಾಬ್ದಾರಿಯನ್ನು ಟ್ವಿಟರ್‌ ನೀಡಿದೆ.

ಆ ಮೂಲಕ 2 ವರ್ಷಗಳಿಗೂ ಅಧಿಕ ಕಾಲ ಟ್ವಿಟರ್‌ ಇಂಡಿಯಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಮನೀಶ್‌ ಅಮೆರಿಕಕ್ಕೆ ತೆರಳುವುದು ಬಹುತೇಕ ಖಚಿತವಾಗಿದೆ.

ಟ್ವಿಟರ್‌ನ ಜಪಾನ್, ದಕ್ಷಿಣ ಕೊರಿಯಾ ಮತ್ತು ಏಷ್ಯಾ ಪೆಸಿಫಿಕ್ ವಿಭಾಗದ ಉಪಾಧ್ಯಕ್ಷ ಯು ಸಸಮೊಟೊ ಮನೀಶ್‌ ವಿಚಾರವಾಗಿ ಶುಕ್ರವಾರ ಟ್ವೀಟ್‌ ಮಾಡಿದ್ದಾರೆ.

ADVERTISEMENT

'ಕಳೆದ 2+ ವರ್ಷಗಳಲ್ಲಿ ಟ್ವಿಟರ್‌ ಇಂಡಿಯಾದ ನಾಯಕತ್ವ ವಹಿಸಿಕೊಂಡಿದ್ದಕ್ಕಾಗಿ ಮನೀಶ್‌ ಅವರಿಗೆ ಧನ್ಯವಾದಗಳು. ಜಗತ್ತಿನಾದ್ಯಂತ ಹೊಸ ಮಾರುಕಟ್ಟೆಗಳಿಗೆ ಆದಾಯ ತಂತ್ರಗಳನ್ನು ರೂಪಿಸುವ ಮತ್ತು ಕಾರ್ಯಾಚರಣೆಗಳನ್ನು ನಡೆಸುವ ಜವಾಬ್ದಾರಿ ನಿಮಗೆ ಸಿಕ್ಕಿದೆ. ಅಮೆರಿಕದಲ್ಲಿ ನೀವು ಹೊಸ ಹುದ್ದೆ ವಹಿಸಿಕೊಳ್ಳುತ್ತಿರುವುದಕ್ಕೆ ಅಭಿನಂದನೆಗಳು. ಈ ಪ್ರಮುಖ ಹುದ್ದೆಯನ್ನು ನೀವು ಮುನ್ನಡೆಸಲಿದ್ದೀರಿ. ಅದನ್ನು ನೋಡಲು ನಾನು ಉತ್ಸುಕನಾಗಿದ್ದೇನೆ' ಎಂದು ಸಸಮೊಟೊ ಟ್ವೀಟ್‌ ಮಾಡಿದ್ದಾರೆ.

ವೃದ್ಧನ ಮೇಲಿನ ಹಲ್ಲೆಗೆ ಸಂಬಂಧಿಸಿದ ವಿಡಿಯೊ ವೈರಲ್ ಆದ ಪ್ರಕರಣದಲ್ಲಿ ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮನಿಶ್ ಮಹೇಶ್ವರಿಗೆ ಉತ್ತರ ಪ್ರದೇಶ ಪೊಲೀಸರು ಇತ್ತೀಚೆಗೆ ನೋಟಿಸ್‌ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.