ADVERTISEMENT

ಅಸಾಂಜ್ ಹಸ್ತಾಂತರ: ಅಮೆರಿಕದ ಮನವಿಗೆ ಬ್ರಿಟನ್ ಗೃಹ ಕಾರ್ಯದರ್ಶಿ ಸಹಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 12:05 IST
Last Updated 13 ಜೂನ್ 2019, 12:05 IST
   

ಲಂಡನ್ : ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜ್ ಅವರನ್ನು ಅಮೆರಿಕಕ್ಕೆ ಹಸ್ತಾಂತರಿಸಬೇಕು ಎಂಬ ಮನವಿಗೆ ಬ್ರಿಟನ್ ಗೃಹ ಕಾರ್ಯದರ್ಶಿ ಸಾಜಿದ್ ಜಾವಿದ್ ಸಹಿ ಹಾಕಿದ್ದಾರೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.

ಅವರೀಗ ಜೈಲಿನಲ್ಲಿದ್ದಾರೆ, ಹಸ್ತಾಂತರಕ್ಕಾಗಿ ಅಮೆರಿಕ ಮನವಿ ಮಾಡಿದೆ.ಈ ಬಗ್ಗೆ ನಾಳೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.ಆದರೆ ಹಸ್ತಾಂತರ ಮನವಿಗೆ ನಾನು ಬುಧವಾರ ಸಹಿ ಹಾಕಿದ್ದು, ಅದನ್ನು ಶುಕ್ರವಾರ ನ್ಯಾಯಾಲಯದ ಮುಂದಿಡಲಾಗುವುದು ಎಂದು ಜಾವಿದ್ ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

47ರ ಹರೆಯದ ಅಸಾಂಜ್, ಬ್ರಿಟನ್‌ನಲ್ಲಿ 50 ವಾರಗಳ ಸೆರೆವಾಸದಲ್ಲಿದ್ದಾರೆ. ಅಮೆರಿಕದ ಸ್ಫೋಟಕ ಮಾಹಿತಿಗಳನ್ನು ಬಹಿರಂಗ ಪಡಿಸುವ ಮೂಲಕ ವಿಶ್ವದ ಗಮನ ಸೆಳೆದಿದ್ದ ಅಸಾಂಜ್, ಅಮೆರಿಕದಿಂದಲೂ ಬಂಧನ ಭೀತಿ ಎದುರಿಸುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.