ADVERTISEMENT

ಉಕ್ರೇನ್‌ ಸೈನಿಕರ ಹತ್ಯೆ ವಿಡಿಯೊ ವಿಶ್ವಾಸಾರ್ಹ ಇರಬಹುದು: ವಿಶ್ವಸಂಸ್ಥೆ

ಏಜೆನ್ಸೀಸ್
Published 8 ಮಾರ್ಚ್ 2023, 14:53 IST
Last Updated 8 ಮಾರ್ಚ್ 2023, 14:53 IST
.
.   

ಜಿನಿವಾ (ಎಎಪ್‌ಪಿ): ವಶಕ್ಕೆ ಪಡೆದ ಉಕ್ರೇನ್‌ ಸೈನಿಕರನ್ನು ರಷ್ಯಾ ಪಡೆಗಳು ಭೀಕರವಾಗಿ ಹತ್ಯೆ ಮಾಡಿದ ವಿಡಿಯೊ ವಿಶ್ವಾಸಾರ್ಹ ಇರಬಹುದು ಎಂದು ವಿಶ್ವಸಂಸ್ಥೆ ಬುಧವಾರ ಹೇಳಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ, ಉಕ್ರೇನ್‌ ಸೈನಿಕರನ್ನು ಕಂದಕದಲ್ಲಿ ನಿಲ್ಲಿಸಿ ಗುಂಡಿನ ದಾಳಿ ನಡೆಸಿದ ಮತ್ತು ಕೊನೆಯಲ್ಲಿ ‘ಉಕ್ರೇನ್‌ಗೆ ವಿದಾಯ’ ಎಂದು ಹೇಳುವ ದೃಶ್ಯವಿದೆ.

‘ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊ ನೋಡಿದ್ದೇವೆ. ಪ್ರಾಥಮಿಕ ಪರಿಶೀಲನೆ ಬಳಿಕ, ವಿಡಿಯೊ ವಿಶ್ವಾಸಾರ್ಹವಿರಬಹುದು ಎಂದು ನಂಬುತ್ತಿದ್ದೇವೆ’ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ವಕ್ತಾರೆ ತಿಳಿಸಿದ್ದಾರೆ.

ADVERTISEMENT

‘ಈ ಬಗ್ಗೆ ನಿಷ್ಪಕ್ಷಪಾತ ಮತ್ತು ಪರಿಣಾಮಕಾರಿ ತನಿಖೆ ನಡೆಯಲಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.