ADVERTISEMENT

ಇರಾನ್‌: ನ್ಯಾಯಾಲಯ ಕಟ್ಟಡದ ಮೇಲೆ ಗುಂಡಿನ ದಾಳಿ– 6 ಜನರ ಹತ್ಯೆ

ಎಪಿ
Published 26 ಜುಲೈ 2025, 13:54 IST
Last Updated 26 ಜುಲೈ 2025, 13:54 IST
   

ದುಬೈ: ಆಗ್ನೇಯ ಇರಾನ್‌ನ ನ್ಯಾಯಾಲಯ ಕಟ್ಟಡದ ಮೇಲೆ ಶನಿವಾರ ದಾಳಿಕೋರರು ಗುಂಡು ಮತ್ತು ಗ್ರೆನೇಡ್‌ ದಾಳಿ ನಡೆಸಿದ್ದು, ಆರು ಮಂದಿ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ 20 ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಸರ್ಕಾರಿ ವಾಹಿನಿ ವರದಿ ಮಾಡಿದೆ.

ಜಹೇದಾನ್‌ನಲ್ಲಿ ದಾಳಿ ನಡೆದಿದೆ. ದಾಳಿಗೆ ಇರಾನ್‌ನ ಪೂರ್ವ ಸಿಸ್ತಾನ್ ಮತ್ತು ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ ಪ್ರಾಂತ್ಯಗಳಿಗೆ ಸ್ವಾತಂತ್ರ್ಯವನ್ನು ಬಯಸುವ ಉಗ್ರರ ಗುಂಪು ಜೈಶ್ ಅಲ್-ಅದ್ಲ್ ಕಾರಣ ಎಂದು ತಸ್ನಿಮ್ ಸುದ್ದಿ ಸಂಸ್ಥೆಯು ತನ್ನ ವರದಿಯಲ್ಲಿ ಆರೋಪಿಸಿದೆ.

ಸಿಸ್ತಾನ್‌ ಮತ್ತು ಬಲೂಚಿಸ್ತಾನ ಪ್ರಾಂತ್ಯದಲ್ಲಿ ನಡೆದ ಸಶಸ್ತ್ರ ದಾಳಿಯಲ್ಲಿ ಭದ್ರತಾ ಪಡೆ ಮೂವರು ಬಂದೂಕುಧಾರಿಗಳನ್ನು ಹತ್ಯೆ ಮಾಡಿದೆ. ಮೃತರು ಯಾರೆಂದು ತಿಳಿದುಬಂದಿಲ್ಲ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.