ADVERTISEMENT

‘ಮಿಲಿಟರಿ ಅಕಾಡೆಮಿಯಲ್ಲಿ ಲೈಂಗಿಕ ದೌರ್ಜನ್ಯ’

ಏಜೆನ್ಸೀಸ್
Published 1 ಫೆಬ್ರುವರಿ 2019, 20:15 IST
Last Updated 1 ಫೆಬ್ರುವರಿ 2019, 20:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ಎರಡು ವರ್ಷಗಳಲ್ಲಿ ಅಮೆರಿಕದ ಮಿಲಿಟರಿ ಅಕಾಡೆಮಿಗಳಲ್ಲಿ ಲೈಂಗಿಕ ದೌರ್ಜನ್ಯ ಪ್ರಮಾಣ ಶೇ 50ರಷ್ಟು ಏರಿಕೆಯಾಗಿದೆ ಎಂದು ಪೆಂಟಗನ್‌ ವರದಿ ಹೇಳಿದೆ.

ಪ್ರತಿ ವರ್ಷ ಲೈಂಗಿಕ ದೌರ್ಜನ್ಯ ಕುರಿತು ಗೌಪ್ಯ ಸಮೀಕ್ಷೆ ನಡೆಸಲಾಗುತ್ತದೆ. ಇದರ ಅನುಸಾರ 2016ರಲ್ಲಿ 507 ಲೈಂಗಿಕಕಿರುಕುಳ ಪ್ರಕರಣ ವರದಿಯಾಗಿದೆ. 2018ರಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರ ಸಂಖ್ಯೆ 747ರಷ್ಟಿದ್ದು, ಶೇ 47ರಷ್ಟು ಹೆಚ್ಚಾಗಿದೆ.

‘ಲೈಂಗಿಕ ದೌರ್ಜನ್ಯ ಹೆಚ್ಚುತ್ತಲೇ ಇರುವುದು ಸಮಂಜಸವಲ್ಲ. ಇದು ಅಸಹ್ಯಕರವಾದ ಬೆಳವಣಿಗೆ’ ಎಂದು ಪೆಂಟಗನ್ ಸಿಬ್ಬಂದಿ ಇಲಾಖೆ ಮುಖ್ಯಸ್ಥ ಎಲಿಸ್ ವಾನ್ ವಿಂಕಲ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.