ಮಾಸ್ಕೊ: ರಷ್ಯಾ ಮತ್ತು ಉಕ್ರೇನ್ ದೇಶಗಳು ಯುದ್ಧ ಕೈದಿಗಳನ್ನು ವಿನಿಮಯವನ್ನು ಮಾಡಿಕೊಂಡಿವೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಸೋಮವಾರ ತಿಳಿಸಿದೆ.
ಸೋಮವಾರ ಎಷ್ಟು ಯುದ್ಧ ಕೈದಿಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿಲ್ಲ. ಆದರೆ, ಎರಡೂ ಕಡೆಯವರು ಸಮಾನ ಪ್ರಮಾಣದಲ್ಲಿ ಯುದ್ಧ ಕೈದಿಗಳನ್ನು ವಿನಿಮಯ ಮಾಡಿಕೊಂಡಿರುವುದಾಗಿ ಹೇಳಿದೆ.
ಹಿಂದಿರುಗಿದ ಯುದ್ಧ ಕೈದಿಗಳು ರಷ್ಯಾದ ನಿಕಟ ಮಿತ್ರರಾಷ್ಟ್ರವಾದ ಬೆಲರೂಸ್‌ನಲ್ಲಿದ್ದಾರೆ. ಹೆಚ್ಚಿನ ಆರೈಕೆಗಾಗಿ ರಷ್ಯಾಕ್ಕೆ ವರ್ಗಾಯಿಸುವ ಮೊದಲು ಅವರಿಗೆ ಮಾನಸಿಕ ಚಿಕಿತ್ಸೆ ಹಾಗೂ ವೈದ್ಯಕೀಯ ನೆರವು ನೀಡಲಾಗುತ್ತಿದೆ ಎಂದು ರಷ್ಯಾದ ಸೇನೆ ತಿಳಿಸಿದೆ.
‘ಹಲವು ಸುತ್ತುಗಳಲ್ಲಿ ವಿನಿಮಯ’ (ಕೀವ್ ವರದಿ): ರಷ್ಯಾದೊಂದಿಗೆ ಮುಂದಿನ ದಿನಗಳಲ್ಲಿ ಹಲವಾರು ಸುತ್ತುಗಳಲ್ಲಿ ಯುದ್ಧ ಕೈದಿಗಳ ವಿನಿಮಯ ನಡೆಯುತ್ತದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದರು.
ಮೊದಲ ಸುತ್ತಿನ ಕೈದಿಗಳ ವಿನಿಮಯದ ಬಳಿಕ ಸೋಮವಾರ ಅವರು ಈ ವಿಷಯ ತಿಳಿಸಿದರು.
‘ಈಗ ಹಿಂದಿರುಗಿದ ಯುದ್ಧ ಕೈದಿಗಳಲ್ಲಿ ಗಾಯಗೊಂಡ ಸೈನಿಕರು ಮತ್ತು ಬಂಧಿಸಲಾದ 25 ವರ್ಷದೊಳಗಿನವರು ಇದ್ದಾರೆ’ ಎಂದು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.