ರಾಯಿಟರ್ಸ್ ಚಿತ್ರ
ದುಬೈ: ಪರಮಾಣು ಮಾತುಕತೆಗಳು ವಿಫಲವಾದರೆ ಮತ್ತು ಅಮೆರಿಕದೊಂದಿಗೆ ಸಂಘರ್ಷ ಉಂಟಾದರೆ ಇರಾನ್ ತನ್ನ ವ್ಯಾಪ್ತಿಯಲ್ಲಿರುವ ಅಮೆರಿಕ ನೆಲೆಗಳ ಮೇಲೆ ದಾಳಿ ನಡೆಸಲಿದೆ ಎಂದು ರಕ್ಷಣಾ ಸಚಿವ ಅಜೀಜ್ ನಾಸಿರ್ಜಾದೆ ಬುಧವಾರ ಎಚ್ಚರಿಸಿದ್ದಾರೆ.
‘ಅಮೆರಿಕದ ಕೆಲವು ಅಧಿಕಾರಿಗಳು ಮಾತುಕತೆ ಯಶಸ್ವಿಯಾಗದಿದ್ದರೆ ದಾಳಿ ನಡೆಸುವ ಬೆದರಿಕೆ ಹಾಕಿದ್ದಾರೆ. ಒಂದು ವೇಳೆ ಸಂಘರ್ಷ ಉಂಟಾದರೆ, ನಮ್ಮ ವ್ಯಾಪ್ತಿಯಲ್ಲಿರುವ, ಅಮೆರಿಕದ ಎಲ್ಲ ನೆಲೆಗಳ ಮೇಲೆ ಧೈರ್ಯದಿಂದ ದಾಳಿ ಮಾಡುತ್ತೇವೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ನಾಸಿರ್ಜಾದೆ ತಿಳಿಸಿದರು.
ಇರಾನ್ ಹೊಸ ಪರಮಾಣು ಒಪ್ಪಂದ ಮಾಡಿಕೊಳ್ಳದಿದ್ದರೆ ಬಾಂಬ್ ದಾಳಿ ಮಾಡುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪದೇ ಪದೇ ಬೆದರಿಕೆ ಹಾಕುತ್ತಿದ್ದಾರೆ.
ಮುಂದಿನ ಸುತ್ತಿನ ಮಾತುಕತೆ ಗುರುವಾರ ನಡೆಯಲಿದೆ ಎಂದು ಟ್ರಂಪ್ ಹೇಳಿದರೆ, ಒಮಾನ್‌ನಲ್ಲಿ ಭಾನುವಾರ ಮಾತುಕತೆ ನಡೆಯಲಿದೆ ಎಂದು ಇರಾನ್ ತಿಳಿಸಿದೆ.
ಅಪಾರ ಪ್ರಮಾಣದಲ್ಲಿ ಯುರೇನಿಯಂ ಹೊಂದುವುದನ್ನು ಇರಾನ್ ನಿಲ್ಲಿಸಬೇಕಿದೆ. ಅದಕ್ಕೆ ಆ ದೇಶ ಒಪ್ಪುವ ಸಾಧ್ಯತೆ ಅಷ್ಟಾಗಿ ಕಾಣುತ್ತಿಲ್ಲ.– ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.