ಸೋಲ್:ಉತ್ತರ ಕೊರಿಯಾವುಪೂರ್ವ ಕರಾವಳಿಯೆಡೆಗೆ ಖಂಡಾಂತರ ಕ್ಷಿಪಣಿ ಉಡಾವಣೆ ಮಾಡಿರುವ ಬೆನ್ನಲ್ಲೇ ಅಮೆರಿಕವು ತನ್ನ ಬಿ–1ಬಿ ಬಾಂಬರ್ ವಿಮಾನವನ್ನು ದಕ್ಷಿಣ ಕೊರಿಯಾದ ಪರ್ಯಾಯ ದ್ವೀಪಕ್ಕೆ ಶನಿವಾರ ಮರು ನಿಯೋಜನೆಗೊಳಿಸಿದೆ.
‘ದಕ್ಷಿಣ ಕೊರಿಯಾ ಮತ್ತು ಅಮೆರಿಕದ ವಾಯುಪಡೆಗಳು ಶನಿವಾರ ಆಗಸದಲ್ಲಿ ಜಂಟಿ ಅಭ್ಯಾಸ ನಡೆಸಿವೆ. ಬಿ–1ಬಿ ಬಾಂಬರ್, ಎಫ್–35 ಸ್ಟೀಲ್ತ್ ಫೈಟರ್ ಹಾಗೂ ಉಭಯ ರಾಷ್ಟ್ರಗಳ ವಾಯುಪಡೆಗಳು ಹೊಂದಿರುವ ಅತ್ಯಾಧುನಿಕ ವಿಮಾನಗಳು ಕವಾಯತಿನಲ್ಲಿ ಪಾಲ್ಗೊಂಡಿದ್ದವು’ ಎಂದು ದಕ್ಷಿಣ ಕೊರಿಯಾ ಸೇನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿ–1ಬಿ ಬಾಂಬರ್ ವಿಮಾನವನ್ನು ಅಮೆರಿಕ ವಾಯುಪಡೆಯ ಬೆನ್ನೆಲುಬು ಎಂದು ಬಣ್ಣಿಸಲಾಗಿದೆ. ಇದು ಜಗತ್ತಿನ ಯಾವುದೇ ಭಾಗದಲ್ಲಾದರೂ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.