ADVERTISEMENT

ಭಾರತ ವಿರೋಧಿ ನಿರ್ಣಯ ಮಂಡಿಸಿದ ಅಮೆರಿಕ ಸಂಸದೆ

ಪಿಟಿಐ
Published 23 ಜೂನ್ 2022, 16:43 IST
Last Updated 23 ಜೂನ್ 2022, 16:43 IST
   

ವಾಷಿಂಗ್ಟನ್‌:ಭಾರತ ವಿರೋಧಿ ಧೋರಣೆ ಮುಂದುವರಿಸಿರುವ ಡೆಮಾಕ್ರಟಿಕ್ ಸಂಸದೆ ಇಲ್ಹಾನ್ ಒಮರ್ ಅವರು ‘ಭಾರತದಲ್ಲಿಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಆಗುತ್ತಿದೆ’ ಎಂದು ಆರೋಪಿಸಿದ್ದು, ಇದಕ್ಕೆ ಸಂಬಂಧಿಸಿದ ನಿರ್ಣಯವೊಂದನ್ನು ಮಂಡಿಸಿದ್ದಾರೆ.

ಭಾರತಕ್ಕೆ ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆಯಾಗುತ್ತಿರುವ ದೇಶವೆಂಬ ಹಣೆಪಟ್ಟಿ ಹಚ್ಚುವಂತೆ ಅವರು ಅಮೆರಿಕ ವಿದೇಶಾಂಗ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಸಂಸದೆಯರಾದ ರಶೀದಾ ತಾಲಿಬ್ ಮತ್ತು ಜುವಾನ್ ವರ್ಗಾಸ್ ಅವರು ಸಹ ಬೆಂಬಲಿಸಿರುವ ಈ ನಿರ್ಣಯದಲ್ಲಿ ಸತತ ಮೂರು ವರ್ಷಗಳವರೆಗೆ ಭಾರತವನ್ನುಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆಯಾಗುತ್ತಿರುವ ದೇಶವೆಂದು ಪರಿಗಣಿಸಲು ಬೈಡನ್ ಆಡಳಿತವನ್ನು ಒತ್ತಾಯಿಸಲಾಗಿದೆ.

ADVERTISEMENT

ಸಂಸತ್‌ನ ಕೆಳಮನೆಯಲ್ಲಿ (ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌) ಮಂಡಿಸಲಾದ ಈ ನಿರ್ಣಯವನ್ನು ಅಗತ್ಯ ಕ್ರಮಕ್ಕಾಗಿ ವಿದೇಶಾಂಗ ವ್ಯವಹಾರಗಳ ಸಮಿತಿಗೆ ಕಳುಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.