ADVERTISEMENT

ಶೇ 10ರಿಂದ ಶೇ 41: ಭಾರತ ಸೇರಿ ವಿವಿಧ ದೇಶಗಳ ಮೇಲೆ ಅಮೆರಿಕ ಸುಂಕ ಪಟ್ಟಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 2:31 IST
Last Updated 1 ಆಗಸ್ಟ್ 2025, 2:31 IST
   

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶುಕ್ರವಾರದ ವ್ಯಾಪಾರ ಒಪ್ಪಂದದ ಗಡುವಿಗೆ ಮುಂಚಿತವಾಗಿ ಹಲವು ವ್ಯಾಪಾರ ಪಾಲುದಾರ ದೇಶಗಳ ಮೇಲೆ ಹೆಚ್ಚಿನ ಸುಂಕಗಳನ್ನು ವಿಧಿಸುವ ಹೊಸ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಇದು ಅಮೆರಿಕದ ವ್ಯವಹಾರಗಳ ಪರವಾಗಿ ಜಾಗತಿಕ ವ್ಯಾಪಾರವನ್ನು ಮರುರೂಪಿಸುವ ಅವರ ಇತ್ತೀಚಿನ ಪ್ರಯತ್ನದ ಭಾಗವಾಗಿದೆ ಎಂದು ವರದಿ ತಿಳಿಸಿದೆ.

69 ವ್ಯಾಪಾರ ಪಾಲುದಾರ ದೇಶಗಳ ಮೇಲೆ ಶೇ 10 ರಿಂದ ಶೇ 41 ರಷ್ಟು ಹೆಚ್ಚಿನ ಆಮದು ಸುಂಕ ದರಗಳನ್ನು ವಿಧಿಸಲಾಗಿದ್ದು, ಇದು ಏಳು ದಿನಗಳಲ್ಲಿ ಜಾರಿಗೆ ಬರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

ಕೆನಡಾ ಮೇಲೆ ಸದ್ಯ ಶೇ 25ರಷ್ಟು ಸುಂಕ ವಿಧಿಸಲಾಗುತ್ತಿದ್ದು, ಅದನ್ನು ಶುಕ್ರವಾರದಿಂದ ಶೇ 35ಕ್ಕೆ ಹೆಚ್ಚಿಸಲಾಗುತ್ತದೆ ಎಂದು ಶ್ವೇತಭವನ ಘೋಷಿಸಿದೆ.

ಉತ್ತರ ಅಮೆರಿಕದ ವ್ಯಾಪಾರ ಒಪ್ಪಂದದ ಅಡಿಯಲ್ಲಿ ದೇಶವನ್ನು ಪ್ರವೇಶಿಸುವ ಕೆನಡಿಯನ್ ಮತ್ತು ಮೆಕ್ಸಿಕನ್ ಸರಕುಗಳಿಗೆ ವಿನಾಯಿತಿ ಜಾರಿಯಲ್ಲಿದೆ ಎಂದು ಶ್ವೇತಭವನ ತಿಳಿಸಿದೆ.

ಮೆಕ್ಸಿಕೊ ಮೇಲೆ ಶೇ 25ರಷ್ಟು ಸುಂಕ ವಿಧಿಸಲಾಗುತ್ತಿದೆ. ಸಿರಿಯಾ, ಬ್ರೆಜಿಲ್ ಸೇರಿದಂತೆ ಕೆಲ ದೇಶಗಳ ಮೇಲೆ ಅತಿ ಹೆಚ್ಚು ಸುಂಕವನ್ನು ಟ್ರಂಪ್ ಘೋಷಿಸಿದ್ದಾರೆ.

ಈ ಪಟ್ಟಿಯಲ್ಲಿ ಭಾರತದ ಮೇಲೆ ಶೇ 25ರಷ್ಟು ಸುಂಕವನ್ನೂ ಉಲ್ಲೇಖಿಸಲಾಗಿದೆ.

ಅಮೆರಿಕದ ಸುಂಕ ಪಟ್ಟಿ ಇಂತಿದೆ

* ಭಾರತ –25%

* ಅಫ್ಗಾನಿಸ್ತಾನ – 35%

* ಅಲ್ಜೀರಿಯಾ – 30 %

* ಅಂಗೋಲಾ – 15 %

* ಬಾಂಗ್ಲಾದೇಶ – 20%

* ಬೊಲಿವಿಯಾ – 15%

* ಬೋಸ್ನಿಯಾ ಮತ್ತು ಹರ್ಜೆಗೋವಿನಾ – 30%

* ಬೋಟ್ಸ್ವಾನಾ – 15%

* ಬ್ರೆಜಿಲ್ – 10%

* ಬ್ರೂನಿ – 25%

* ಕಾಂಬೋಡಿಯಾ – 19%

* ಕ್ಯಾಮರೂನ್ – 15%

* ಚಾಡ್ – 15%

* ಕೋಸ್ಟಾ ರಿಕಾ – 15%

* ಕೋಟ್ ಡಿ`ಐವೊಯಿರ್ – 15%

* ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ – 15%

* ಈಕ್ವೆಡಾರ್ – 15%

* ಈಕ್ವಟೋರಿಯಲ್ ಗಿನಿಯಾ – 15%

* ಯುರೋಪಿಯನ್ ಒಕ್ಕೂಟ: ಕಾಲಮ್ 1 ಸುಂಕ ದರ –5%

* ಫಾಕ್ಲ್ಯಾಂಡ್ ದ್ವೀಪಗಳು – 10%

* ಫಿಜಿ – 15%

* ಘಾನಾ – 15%

* ಗಯಾನಾ –15%

* ಐಸ್ಲ್ಯಾಂಡ್ –15%

* ಇಂಡೋನೇಷ್ಯಾ – 19%

* ಇರಾಕ್ – 35%

* ಇಸ್ರೇಲ್ – 15%

* ಜಪಾನ್ – 15%

* ಜೋರ್ಡಾನ್ – 15%

* ಕಝಾಕಿಸ್ತಾನ್ – 25%

* ಲಾವೋಸ್ – 40%

* ಲೆಸೊಥೊ – 15%

* ಲಿಬಿಯಾ – 30%

* ಲಿಚ್ಟೆನ್‌ಸ್ಟೈನ್ – 15%

* ಮಡಗಾಸ್ಕರ್ – 15%

* ಮಲಾವಿ – 15%

* ಮಲೇಷ್ಯಾ – 19%

* ಮಾರಿಷಸ್ – 15%

* ಮಾಲ್ಡೊವಾ – 25%

* ಮ್ಯಾನ್ಮಾರ್ (ಬರ್ಮಾ) – 40%

* ಮೊಜಾಂಬಿಕ್ – 15%

* ನಮೀಬಿಯಾ – 15%

* ನೌರು – 15%

* ನ್ಯೂಜಿಲೆಂಡ್ – 15%

* ನಿಕರಾಗುವಾ – 18%

* ನೈಜೀರಿಯಾ – 15%

* ಉತ್ತರ ಮ್ಯಾಸಿಡೋನಿಯಾ – 15%

* ನಾರ್ವೆ – 15%

* ಪಾಕಿಸ್ತಾನ – 19%

* ಪಪುವಾ ನ್ಯೂಗಿನಿ – 15%

* ಫಿಲಿಪೈನ್ಸ್ – 19%

* ಸೆರ್ಬಿಯಾ – 35%

* ದಕ್ಷಿಣ ಆಫ್ರಿಕಾ – 30%

* ದಕ್ಷಿಣ ಕೊರಿಯಾ – 15%

* ಶ್ರೀಲಂಕಾ – 20%

* ಸ್ವಿಟ್ಜರ್ಲೆಂಡ್ – 39%

* ಸಿರಿಯಾ – 41%

* ತೈವಾನ್ – 20%

* ಥೈಲ್ಯಾಂಡ್ – 19%

* ಟ್ರಿನಿಡಾಡ್ ಮತ್ತು ಟೊಬಾಗೊ – 15%

* ಟುನೀಶಿಯಾ 25%

* ಟರ್ಕಿ – 15%

* ಉಗಾಂಡಾ – 15%

* ಬ್ರಿಟನ್ – 10%

* ವನವಾಟು – 15%

* ವೆನೆಜುವೆಲಾ – 15%

* ವಿಯೆಟ್ನಾಂ – 20%

* ಜಾಂಬಿಯಾ – 15%

* ಜಿಂಬಾಬ್ವೆ – 15%

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.