ವಾಷಿಂಗ್ಟನ್: ಭಾರತದೊಂದಿಗಿನ ಕಾರ್ಯತಂತ್ರ ಪಾಲುದಾರಿಕೆಯನ್ನು ವಿಸ್ತರಿಸುವ ಮತ್ತು ದ್ವಿಪಕ್ಷೀಯ ಸಂಬಂಧ ವೃದ್ಧಿಸುವ ಉದ್ದೇಶದಿಂದ ಅಮೆರಿಕ ಗಮನಾರ್ಹ ಹೂಡಿಕೆ ಮಾಡಿದೆ ಎಂದು ಅಮೆರಿಕ ವಿದೇಶಾಂಗ ಉಪ ಕಾರ್ಯದರ್ಶಿ ಕುರ್ತ್ ಕ್ಯಾಂಪ್‌ಬೆಲ್ ತಿಳಿಸಿದರು.
ಭಾರತ-ಅಮೆರಿಕ ರಕ್ಷಣಾ ವೇಗವರ್ಧಕ ಪರಿಸರ ವ್ಯವಸ್ಥೆ (ಇಂಡಸ್-ಎಕ್ಸ್) ಶೃಂಗಸಭೆ ಉದ್ದೇಶಿಸಿ ಸೋಮವಾರ ಮಾತನಾಡಿದ ಅವರು, ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧವನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯಲು ಸಾಕಷ್ಟು ಹೂಡಿಕೆ ಮಾಡಲಾಗಿದೆ ಎಂದರು.
ಮೂರನೇ ಆವೃತ್ತಿಯ ಇಂಡಸ್–ಎಕ್ಸ್ ಶೃಂಗಸಭೆಯು ಸೋಮವಾರ ಆರಂಭವಾಗಿದೆ. ಭಾರತ–ಅಮೆರಿಕ ಕಾರ್ಯತಂತ್ರ ಮತ್ತು ಪಾಲುದಾರಿಕೆ ವೇದಿಕೆಯು ಕ್ಯಾಲಿಫೋರ್ನಿಯಾದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಶೃಂಗಸಭೆಯನ್ನು ಆಯೋಜಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.