ADVERTISEMENT

ಲಸಿಕೆ ಪಡೆಯದ ನೌಕರರಿಗೆ ವೇತನರಹಿತ ರಜೆ: ಯುನೈಟೆಡ್‌ ಏರ್‌ಲೈನ್ಸ್ ಪರ ತೀರ್ಪು

ಪಿಟಿಐ
Published 9 ನವೆಂಬರ್ 2021, 6:06 IST
Last Updated 9 ನವೆಂಬರ್ 2021, 6:06 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ವೈದ್ಯಕೀಯ ಅಥವಾ ಧರ್ಮದ ಕಾರಣ ನೀಡಿ ಕೋವಿಡ್‌ ಲಸಿಕೆ ಪಡೆಯಲು ನಿರಾಕರಿಸುವ ನೌಕರರಿಗೆ ವೇತನ ರಹಿತ ರಜೆ ನೀಡುವ ಯುನೈಟೆಡ್‌ ಏರ್‌ಲೈನ್ಸ್‌ ಕಂಪನಿಯ ನಿರ್ಧಾರವನ್ನು ನ್ಯಾಯಾಲಯ ಎತ್ತಿ ಹಿಡಿದಿದೆ.

ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಿದ್ದ ಜೋ ಬೈಡನ್ ಸರ್ಕಾರದ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು ಈ ತೀರ್ಪು ನೀಡಿದ್ದಾರೆ.

ಯುನೈಟೆಡ್ ಏರ್‌ಲೈನ್ಸ್‌ ಕಂಪನಿ ತನ್ನ ಉದ್ಯೋಗಿಗಳಿಗೆ ಲಸಿಕೆ ಹಾಕಿಕೊಳ್ಳುವುದನ್ನು ಕಡ್ಡಾಯಗೊಳಿಸಿತ್ತು. ಲಸಿಕೆ ಹಾಕಿಸಿಕೊಳ್ಳದ ನೌಕರರನ್ನು ವಜಾಗೊಳಿಸುವುದಾಗಿ ಆಗಸ್ಟ್‌ 6 ರಂದು ಘೋಷಿಸಿತ್ತು.

ADVERTISEMENT

’ಕಡ್ಡಾಯವಾಗಿ ಲಸಿಕೆ ಪಡೆಯಬೇಕೆಂಬ ಯುನೈಟೆಡ್ ಏರ್‌ಲೈನ್‌ ಕಂಪನಿಯ ಆದೇಶವು ಕೆಟ್ಟ ನೀತಿ ಎಂದು ನ್ಯಾಯಾಲಯ ನಿರ್ಧರಿಸಲು ಸಾಧ್ಯವಿಲ್ಲ’ ಎಂದು ಟೆಕ್ಸಾಸ್ ನ್ಯಾಯಾಧೀಶ ಮಾರ್ಕ್ ಪಿಟ್‌ಮನ್ ಸೋಮವಾರ ಆದೇಶದಲ್ಲಿ ತಿಳಿಸಿದ್ದಾರೆ.

ವೈದ್ಯಕೀಯ ಅಥವಾ ಧಾರ್ಮಿಕ ವಿನಾಯಿತಿಯ ಲಾಭವನ್ನು ಪಡೆಯುವ ಉದ್ಯೋಗಿಗಳಿಗೆ ಯುನೈಟೆಡ್ ಏರ್‌ಲೈನ್ಸ್ ರಜೆ ನೀಡಬಹುದು. ಆದರೆ, ರಜೆ ತೆಗೆದುಕೊಂಡ ಅವಧಿಯ ವೇತನವನ್ನು ಪಾವತಿಸುವುದಿಲ್ಲ ಎಂಬ ಅಂಶವನ್ನು ಪರಿಗಣಿಸಿ ನ್ಯಾಯಾಲಯ ಈ ತೀರ್ಪು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.