ADVERTISEMENT

ಸ್ವಾತಂತ್ರ್ಯೋತ್ಸವ: ಭಾರತೀಯರಿಗೆ ಶುಭಾಶಯ ಕೋರಿದ ಅಮೆರಿಕ ಸಂಸದರು, ಅಧಿಕಾರಿಗಳು

ಪಿಟಿಐ
Published 16 ಆಗಸ್ಟ್ 2020, 7:34 IST
Last Updated 16 ಆಗಸ್ಟ್ 2020, 7:34 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ಭಾರತದ 74ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಅಮೆರಿಕದ ಸಂಸದರು ಹಾಗೂ ಉನ್ನತ ಅಧಿಕಾರಿಗಳು ಇಲ್ಲಿರುವ ಭಾರತೀಯರಿಗೆ ಶುಭಾಶಯ ಕೋರಿದ್ದಾರೆ.

ಡೆಮಾಕ್ರಾಟಿಕ್‌ ಮತ್ತು ರಿಪಬ್ಲಿಕನ್‌ ಸಂಸದರು ಶುಭಾಶಯ ಕೋರಿದ್ದಲ್ಲದೇ, ಉಭಯ ದೇಶಗಳು ಅನುಸರಿಸುವ ಮೌಲ್ಯಗಳಲ್ಲಿ ಸಾಮ್ಯತೆ ಇವೆ. ಎರಡೂ ದೇಶಗಳ ಬಾಂಧವ್ಯ ಗಟ್ಟಿಯಾಗಲುಇಂಥ ಮೌಲ್ಯಗಳೇ ಕಾರಣ ಎಂದೂ ಹೇಳಿದ್ದಾರೆ.

ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಅವರ ಮಗ ಡೊನಾಲ್ಡ್‌ ಜೆ.ಟ್ರಂಪ್‌ ಜೂನಿಯರ್, ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿಯಾಗಿರುವ ಡೆಮಾಕ್ರಾಟಿಕ್ ಪಕ್ಷದ ಜೊ ಬಿಡೆನ್, ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಸೇರಿದಂತೆ ಹಲವಾರು ಸಂಸದರು ಶುಭಾಶಯ ಕೋರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.