
ವೀಸಾ
ನ್ಯೂಯಾರ್ಕ್/ವಾಷಿಂಗ್ಟನ್: ಬಾಂಗ್ಲಾದೇಶ, ಪಾಕಿಸ್ತಾನ ಸೇರಿದಂತೆ ‘ಹೆಚ್ಚು ಅಪಾಯಕಾರಿ’ ಎಂದು ಪರಿಗಣಿಸಲಾದ 75 ದೇಶಗಳ ವಲಸಿಗರ ವೀಸಾ ಅರ್ಜಿಗಳ ಪರಿಶೀಲನೆ ಸ್ಥಗಿತಗೊಳಿಸಿ ಹೊರಡಿಸಿರುವ ಆದೇಶವು ಪ್ರವಾಸಿ ಅಥವಾ ಉದ್ಯೋಗ ವೀಸಾಗಳಿಗೆ ಅನ್ವಯಿಸುವುದಿಲ್ಲ ಎಂದು ಅಮೆರಿಕ ಹೇಳಿದೆ.
ಅಮೆರಿಕದಲ್ಲಿ ಶಾಶ್ವತವಾಗಿ ನೆಲಸುವ ಉದ್ದೇಶದೊಂದಿಗೆ ಸಲ್ಲಿಸಲಾಗಿರುವ ಅರ್ಜಿಗಳಿಗೆ ಇದು ಅನ್ವಯವಾಗುತ್ತದೆ ಎಂದು ಎಂದು ತಿಳಿಸಿದೆ.
ಈ 75 ದೇಶಗಳ ಪಟ್ಟಿಯನ್ನು ವಿದೇಶಾಂಗ ಇಲಾಖೆ ಬುಧವಾರ ಬಿಡುಗಡೆ ಮಾಡಿದೆ. ಅಮೆರಿಕದ ನಾಗರಿಕರ ಕಲ್ಯಾಣ ಯೋಜನೆಗಳ ಪ್ರಯೋಜನವನ್ನು ಅತಿ ಹೆಚ್ಚು ಪ್ರಮಾಣದಲ್ಲಿ ಈ ದೇಶಗಳ ವಲಸಿಗರು ಪಡೆದುಕೊಳ್ಳುತ್ತಿದ್ದಾರೆ ಎಂಬ ಕಾರಣ ನೀಡಿ ವಲಸೆ ವೀಸಾ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ತಿಳಿಸಿದೆ.
ಜನವರಿ 21ರಿಂದ ಜಾರಿಗೆ ಬರುವಂತೆ ಅಫ್ಗಾನಿಸ್ತಾನ, ಅಲ್ಬೇನಿಯಾ, ಭೂತಾನ್, ಬ್ರೆಜಿಲ್, ಬರ್ಮಾ, ಕಾಂಬೋಡಿಯಾ ಸೇರಿದಂತೆ 75 ದೇಶಗಳ ವಲಸಿಗರಿಗೆ ವೀಸಾ ವಿತರಣೆಯನ್ನು ಸ್ಥಗಿತಗೊಳಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.