ADVERTISEMENT

ಚೀನಾಕ್ಕೆ ಹೊರಟ ವಿಶ್ವಸಂಸ್ಥೆ ತಜ್ಞರ ತಂಡ

ಕೋವಿಡ್–19 ಉಗಮ ಅಧ್ಯಯನ

ರಾಯಿಟರ್ಸ್
Published 8 ಜುಲೈ 2020, 7:09 IST
Last Updated 8 ಜುಲೈ 2020, 7:09 IST
ಕೊರೊನಾ ವೈರಸ್‌– ಸಾಂಕೇತಿಕ ಚಿತ್ರ
ಕೊರೊನಾ ವೈರಸ್‌– ಸಾಂಕೇತಿಕ ಚಿತ್ರ   

ಜಿನೀವಾ: ಪ್ರಾಣಿಗಳಿಂದಕೊರೊನಾ ಸೋಂಕು ಹೇಗೆ ಮಾನವನ ದೇಹ ಹೊಕ್ಕಿತು ಎಂಬ ರಹಸ್ಯ ತಿಳಿಯಲು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ತಂಡ ವಾರಾಂತ್ಯದಲ್ಲಿ ಚೀನಾಕ್ಕೆ ಪ್ರಯಾಣ ಬೆಳೆಸಲಿದೆ.

‘ಕೊರೊನಾ ಸೋಂಕು ಮತ್ತು ರೋಗಲಕ್ಷಣ ಮೊದಲ ಬಾರಿಗೆ ಕಾಣಿಸಿಕೊಂಡಚೀನಾದ ವುಹಾನ್‌ಗಿಂತ ಅಧ್ಯಯನ ನಡೆಸಲು ಸೂಕ್ತ ಸ್ಥಳ ಬೇರೊಂದಿಲ್ಲ’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಆರೋಗ್ಯ ಸೇವೆಗಳ ಮುಖ್ಯಸ್ಥ ಮೈಕ್‌ ರೇಯಾನ್‌ ಜಿನೀವಾದಲ್ಲಿ ತಿಳಿಸಿದ್ದಾರೆ.

ಕೋವಿಡ್‌–19 ವೈರಸ್‌ ಉಗಮ, ಸೋಂಕು ಯಾವ ಪ್ರಾಣಿಯಿಂದ ಮಾನವನ ದೇಹ ಹೊಕ್ಕಿತು ಎಂಬ ಸಂಗತಿಗಳ ಮೇಲೆ ತಜ್ಞರ ತಂಡ ಬೆಳಕು ಚೆಲ್ಲಲಿದೆ. ಕೊರೊನಾ ಸೋಂಕಿನ ಬಗ್ಗೆ ಅಗತ್ಯ ಮಾಹಿತಿ ಬಿಟ್ಟುಕೊಡದ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಚೀನಾ ವಿರುದ್ಧ ಅಮೆರಿಕ ಮತ್ತು ಇತರ ರಾಷ್ಟ್ರಗಳು ಹರಿಹಾಯ್ದಿದ್ದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.