ADVERTISEMENT

ಜಿಂಬಾಬ್ವೆ: ಮುಗಾಬೆ ನಂತರದ ಮೊದಲ ಸಾರ್ವತ್ರಿಕ ಚುನಾವಣೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2018, 12:55 IST
Last Updated 31 ಜುಲೈ 2018, 12:55 IST
ರಾಬರ್ಟ್‌ ಮುಗಾಬೆ
ರಾಬರ್ಟ್‌ ಮುಗಾಬೆ   

ಹರಾರೆ:ಜಿಂಬಾಬ್ವೆ ಸಾರ್ವತ್ರಿಕ ಚುನಾವಣೆ ಸೋಮವಾರ ನಡೆದಿದೆ.ಸತತ 37 ವರ್ಷಗಳ ಕಾಲ ಅಧಿಕಾರ ನಡೆಸಿದ್ದ ಅಧ್ಯಕ್ಷರಾಬರ್ಟ್‌ ಮುಗಾಬೆ ಅವರನ್ನುಪದಚ್ಯುತಗೊಳಿಸಿದ ನಂತರ ನಡೆದ ಮೊದಲ ಚುನಾವಣೆ ಇದಾಗಿದ್ದು, ಭಾರಿ ಕುತೂಹಲಕ್ಕೆ ಕಾರಣವಾಗಿದೆ.‌

1980ರಲ್ಲಿ ದೇಶ ಸ್ವಾತಂತ್ರ್ಯ ಪಡೆದಾಗಿನಿಂದ ಇಲ್ಲಿಯವರೆಗೆದೇಶವನ್ನು ಮುನ್ನಡೆಸಿದ್ದ ರಾಬರ್ಟ್ ಮುಗಾಬೆ ಅವರನ್ನು ಕಳೆದ ನವೆಂಬರ್‌ನಲ್ಲಿ ಪದಚ್ಯುತಗೊಳಿಸಲಾಗಿತ್ತು.

ಮುಗಾಬೆ ನಂತರ ಅಧಿಕಾರಕ್ಕೇರಿರುವ ಜೆಎಎನ್‌ಯು–ಪಿಎಫ್‌ (ಜಿಂಬಾಬ್ವೆ ಆಫ್ರಿಕನ್‌ ನ್ಯಾಷನಲ್‌ ಯೂನಿಯನ್‌–ಪೇಟ್ರಿಯಾಟಿಕ್‌ ಫ್ರಂಟ್‌)ಪಕ್ಷದಎಮ್ಮರ್‌ಸನ್ ನನ್‌ಗಾಗುವಾ ಹಾಗೂ ವಿರೋಧ ಪಕ್ಷ ಎಂಡಿಸಿ–ಟಿ(ಮೂವ್‌ಮೆಂಟ್‌ ಫಾರ್‌ ಡೆಮಾಕ್ರಿಟಿಕ್‌ ಚೇಂಜ್‌)ನಾಯಕ ನೆಲ್ಸನ್‌ ಛಾಮಿಸಾ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಆದರೆಇಬ್ಬರೂಗೆದ್ದೇ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ADVERTISEMENT
ಜೆಎಎನ್‌ಯು–ಪಿಎಫ್‌ ಪಕ್ಷದಎಮ್ಮರ್‌ಸನ್ ನನ್‌ಗಾಗುವಾ –ಎಎಫ್‌ಪಿ ಚಿತ್ರ

ತಮ್ಮ ನಿಕಟವರ್ತಿಯೂ ಆಗಿರುವ ನನ್‌ಗುವಾಗೆ ಮತ ಹಾಕುವುದಿಲ್ಲ ಎಂದುಮುಗಾಬೆ ಮತದಾನದ ದಿನವೇ ಹೇಳಿದ್ದಾರೆ. ಇದೂ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ದೇಶದಲ್ಲಿಒಟ್ಟು 10,985 ಮತಕೇಂದ್ರಗಳಿವೆ.56,35,706 ಜನಮತದಾನಕ್ಕೆ ಹೆಸರು ನೊಂದಾಯಿಸಿಕೊಂಡಿದ್ದರು. ಇದರಲ್ಲಿ ಶೇ.43 ರಷ್ಟು ಜನರು 35 ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ. ಈ ವರ್ಗದ ಮತದಾರರು ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

ಮತ ಚಲಾವಣೆಗೂ ಮುನ್ನ ಸಾಲಿನಿಂತಿರುವ ಯುವಕರು –ಎಎಫ್‌ಪಿ ಚಿತ್ರ

ಶೇ. 75ರಷ್ಟು ಮತದಾನವಾಗಿದ್ದು, ಫಲಿತಾಂಶ ಆಗಸ್ಟ್‌ 04ರಂದು ಪ್ರಕಟವಾಗುವ ಸಾಧ್ಯತೆ ಇದೆ.

ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವ ಮತ್ತು ಕುಂಟಿತ ಆರ್ಥಿಕತೆಯಜಿಂಬಾಬ್ವೆಗೆಸಾರ್ವತ್ರಿಕ ಚುನಾವಣೆ ಸವಾಲಿನದುಎಂದು ಬಿಬಿಸಿ ವರದಿ ಮಾಡಿದೆ.

ಚುನಾವಣೆ ವೇಳೆ ಜಿಂಬಾಬ್ವೆಯಲ್ಲಿ ಕಾರ್ಯನಿರ್ವಹಿದಯುರೋಪ್‌ ಒಕ್ಕೂಟ ಹಾಗೂ ಯುಎಸ್‌ನ ವೀಕ್ಷಕರ ತಂಡವು, ‘ಅಧ್ಯಕ್ಷಸ್ಥಾನದ ಮೇಲೆ ಕಣ್ಣಿಟ್ಟಿರುವ ಒಟ್ಟು 23 ಅಭ್ಯರ್ಥಿಗಳಲ್ಲಿನನ್‌ಗಾಗುವಾ ಹಾಗೂ ಛಾಮಿಸಾ ನಡುವೆ ನಿಕಟ ಸ್ಪರ್ಧೆ ಇದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಎಂಡಿಸಿ–ಟಿ ನಾಯಕ ನೆಲ್ಸನ್‌ ಛಾಮಿಸಾ –ರಾಯಿಟರ್ಸ್‌ ಚಿತ್ರ

ಸದ್ಯ ಅಧ್ಯಕ್ಷರಾಗಿರುವ ನನ್‌ಗುವಾ ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಸೌಕರ್ಯಗಳ ಭರವಸೆಯೊಂದಿಗೆ ಚುನಾವಣೆ ಎದುರಿಸಿದ್ದಾರೆ.ಛಾಮಿಸಾ ದೇಶದ ಆರ್ಥಿಕತೆಯನ್ನು ಪುನಃ ಸ್ಥಾಪಿಸುವುದು, ಬುಲೆಟ್‌ ರೈಲು ಯೋಜನೆ ಜಾರಿ ಹಾಗೂಒಲಿಂಪಿಕ್‌ ಕ್ರೀಡಾಕೂಟವನ್ನು ದೇಶದಲ್ಲಿ ಆಯೋಜಿಸುವ ವಿಶ್ವಾಸದೊಂದಿಗೆ ಚುನಾವಣೆಗೆ ಧುಮುಕಿದ್ದಾರೆ.

25ನೇ ವಯಸ್ಸಿನಲ್ಲೇ ಸಂಸದರಾಗಿ ಆಯ್ಕೆ ಆಗಿ, 31ರ ವೇಳೆಗೆ ಕ್ಯಾಬಿನೆಟ್‌ ಸಚಿವರಾಗಿ ಆಯ್ಕೆ ಆಗಿರುವ ಛಾಮಿಸಾ ಒಂದು ವೇಳೆ ಈ ಚುನಾವಣೆಯಲ್ಲಿ ಯಶಸ್ವಿಯಾದರೆ 40ನೇ ವಯಸ್ಸಿಗೆ ಜಿಂಬಾಬ್ವೆಯ ಅಧ್ಯಕ್ಷ ಸ್ಥಾನಕ್ಕೇರಲಿದ್ದಾರೆ. ಹೀಗಾಗಿ ಈ ಚುನಾವಣೆ ಕುತೂಹಲದ ಜೊತೆಗೆ ಹಲವು ನಿರೀಕ್ಷೆಗಳನ್ನೂ ಮೂಡಿಸಿದೆ.

ಚುನಾವಣೆ ವಿಶೇಷತೆಗಳು

ಮುಗಾಬೆ ಇಲ್ಲದ ಮೊದಲ ಚುನಾವಣೆ

1980ರಲ್ಲಿ ದೇಶ ಸ್ವಾತಂತ್ರ್ಯವಾದಗಿನಿಂದಲೂ ಅಧಿಕಾರ ನಡೆಸಿರುವ ಮುಗಾಬೆ ಈ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ.

ದೇಶದಲ್ಲಿ 1987ರಲ್ಲಿ ಅಧ್ಯಕ್ಷೀಯ ಪದ್ಧತಿ ಜಾರಿಯಾಗುವವರೆಗೆ ಪ್ರಧಾನಿಯಾಗಿದ್ದ ಇವರು, 2017ರ ನವೆಂಬರ್‌ನಲ್ಲಿ ಪದಚ್ಯುತರಾಗುವವರೆಗೂ ಅಧ್ಯಕ್ಷರಾಗಿದ್ದರು

ಪದಚ್ಯುತ ಅಧ್ಯಕ್ಷರಾಬರ್ಟ್‌ ಮುಗಾಬೆ

ಉದ್ದದ ಮತಪತ್ರ

ಚುನಾವಣಾ ಕಣದಲ್ಲಿನ ರಾಬರ್ಟ್‌ ಮುಗಾಬೆ ಅವರ ಅನುಪಸ್ಥಿತಿ ಮತ್ತೊಂದು ವಿಶೇಷಕ್ಕೆ ಎಡೆ ಮಾಡಿಕೊಟ್ಟಿದೆ. ಈ ಬಾರಿ 23 ಆಕಾಂಕ್ಷಿಗಳು ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸಿದ್ದರು. ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟು 57 ರಾಜಕೀಯ ಪಕ್ಷಗಳು ಕಣದಲ್ಲಿದ್ದವು.

ಇದನ್ನು ರಾಜಕೀಯ ವಿಶ್ಲೇಷಕರು, ಇದು ಕಳೆದ 37 ವರ್ಷಗಳಲ್ಲಿದ್ದ ಮಾಜಿ ಅಧ್ಯಕ್ಷ‘ಮುಗಾಬೆ ಭಯ’ವನ್ನು ತೋರುತ್ತದೆ ಎಂದು ವ್ಯಾಖ್ಯಾನಿಸಿದ್ದಾರೆ.

ಮತಪತ್ರದ ಎರಡು ವಿಭಾಗವಾಗಿ(ಎಡ–ಬಲ) ಮಾಡಲಾಗಿದೆ. ಪತ್ರದ ಎರಡೂ ಭಾಗದಲ್ಲಿ ಅಭ್ಯರ್ಥಿಗಳ ಹೆಸರು ಹಾಗೂ ಭಾವಚಿತ್ರವನ್ನು ನೀಡಲಾಗಿದೆ.

ಮತಪತ್ರದ ಎರಡೂ ಭಾಗದಲ್ಲಿರುವ ಅಭ್ಯರ್ಥಿಗಳ ಹೆಸರು ಹಾಗೂ ಭಾವಚಿತ್ರ

ಅಧ್ಯಕ್ಷ ನನ್‌ಗುವಾ ಅವರನ್ನು ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇರಿಸಲಾಗಿದ್ದು, ಇದನ್ನು ಟೀಕಿಸಿರುವ ಇತರ ಅಭ್ಯರ್ಥಿಗಳು ಚುನಾವಣೆ ಅಕ್ರಮ ಎಂದು ದೂರಿದ್ದಾರೆ. ಆದರೆ ತನ್ನ ಕ್ರಮ ಸಮರ್ಥಿಸಿಕೊಂಡಿರುವ ಚುನಾವಣಾ ಆಯೋಗ ಪತ್ರದ ಒಂದೇ ಸಾಲಿನಲ್ಲಿ ಅಭ್ಯರ್ಥಿಗಳ ಹೆಸರನ್ನು ನಮೂದಿಸುವುದರಿಂದ ಮತಪತ್ರದ ಗಾತ್ರ ದೊಡ್ಡದಾಗಲಿದ್ದು, ಸಮರ್ಪಕವಾಗಿ ಮಡಚಿ ಮತ ಪೆಟ್ಟಿಗೆಯಲ್ಲಿ ಹಾಕಲಾಗದು’ ಎಂದು ಸಮರ್ಥಿಸಿಕೊಂಡಿದೆ.

‘ಬೆರಳಚ್ಚು’ ಗುರುತಿನ ಪತ್ರ

ಜಿಂಬಾಬ್ವೆ ಚುನಾವಣಾ ಆಯೋಗ ಬೆರಳಚ್ಚು ಚುನಾವಣಾ ಗುರುತಿನ ಪತ್ರಗಳನ್ನು ಈ ಬಾರಿ ಪರಿಚಯಿಸಿದೆ. ಇದರಿಂದ ಒಂದಕ್ಕಿಂತ ಹೆಚ್ಚು ಬಾರಿ, ಹೆಚ್ಚು ಕಡೆಗಳಲ್ಲಿ ಮತ ಚಲಾಯಿಸುವುದನ್ನು ತಪ್ಪಿಸಲು ನೆರವಾಗಲಿದೆ.

ಪ್ರಾಣಿ ಸಂಕೇತಗಳಿಗೆ ನಿಷೇಧ

ಅಭ್ಯರ್ಥಿಗಳು ಪ್ರಾಣಿ ಪಕ್ಷಿಗಳ ಸಂಕೇತಗಳನ್ನು ತಮ್ಮ ಚಿಹ್ನೆಯಾಗಿ ಹೊಂದುವುದನ್ನು ಚುನಾವಣಾ ಆಯೋಗ ನಿಷೇಧಿಸಿತ್ತು. ಉದಾಹರಣೆಗೆ ಆಫ್ರಿಕಾದಂತಹ ದೇಶಗಳಲ್ಲಿ ಹಾವು, ಗೂಬೆಯಂತಹ ಪ್ರಾಣಿ ಪಕ್ಷಿಗಳು ಮೂಢನಂಬಿಕೆ, ಮಾಯಮಂತ್ರದ ದೃಷ್ಟಿಯಿಂದ ಮಹತ್ವ ಪಡೆದುಕೊಳ್ಳುತ್ತವೆ. ಹೀಗಾಗಿ ಪ್ರಾಣಿ ಪಕ್ಷಿಗಳ ಚಿತ್ರಗಳನ್ನು ನಿಷೇಧಿಸಲಾಗಿದೆ.

ಸಲಿಂಗಿ ವಿರೋಧಿ ಹೇಳಿಕೆಗಳಿಗೂ ಕಡಿವಾಣ

ಭಾಷಣಗಳ ನಡುವೆ ಸಲಿಂಗಿಗಳು,ಲಿಂಗ ಪರಿವರ್ತಿತರ ವಿರುದ್ಧ ಮಾತನಾಡುವುದನ್ನು ನಿಷೇಧಿಸಲಾಗಿದೆ. ಪದಚ್ಯುತ ಅಧ್ಯಕ್ಷ ಮುಗಾಬೆ ಅವರು ಚುನಾವಣೆ ಸಂದರ್ಭವೊಂದರಲ್ಲಿ ‘ಸಲಿಂಗಿಗಳು ಹಂದಿಗಿಂತಲೂ ಕೀಳು’ ಎಂದು ಹರಿಹಾಯ್ದಿದ್ದರು. ಹೀಗಾಗಿ ಈ ಸಮುದಾಯಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.