ADVERTISEMENT

ಪ್ರಿಯ ಓದುಗರೇ

ಯು.ಎಸ್.ಕಾನ್ಸುಲೇಟ್, ಚೆನ್ನೈ
Published 3 ಮಾರ್ಚ್ 2012, 19:30 IST
Last Updated 3 ಮಾರ್ಚ್ 2012, 19:30 IST
ಪ್ರಿಯ ಓದುಗರೇ
ಪ್ರಿಯ ಓದುಗರೇ   

ಪ್ರಿಯ ಓದುಗರೇ,
ಶುಭಾಶಯಗಳು. ಹಿತಮಯವಾದ ಚಳಿ ಹಾಗೂ ಹದವಾದ ಬಿಸಿಲು ಹರಡಿದ್ದ ಆಹ್ಲಾದಕರ ವಾತಾರಣ ಈ ತಿಂಗಳನ್ನು ತುಂಬಿಕೊಂಡಿತ್ತು. ಐತಿಹಾಸಿಕ ಹಾಗೂ ಮೋಹಕ ನಗರ ಮೈಸೂರಿಗೆ ಮೊಟ್ಟ ಮೊದಲ ಬಾರಿಗೆ ಭೇಟಿ ನೀಡಿದ್ದು ಮರೆಯಲಾಗದ ಅನುಭವ.

ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯವಸ್ತು ಸಂಶೋಧನಾ ಸಂಸ್ಥೆಗೆ  50 ಸಾವಿರ ಅಮೆರಿಕನ್ ಡಾಲರ್ ಮೊತ್ತದ ಅನುದಾನದ ಚೆಕ್ಕನ್ನು ಹಸ್ತಾಂತರಿಸುವುದು ನಮ್ಮ ಪ್ರವಾಸದ ಮುಖ್ಯ ಉದ್ದೇಶವಾಗಿತ್ತು.

ರಾಜ್ಯಾಡಳಿತ, ಆರ್ಥಿಕ ನೀತಿ, ಸೇನಾ ವ್ಯೆಹ ರಚನೆಯ ಕುರಿತ ನಾಲ್ಕನೇ ಶತಮಾನದ ಶಾಸ್ತ್ರಗ್ರಂಥ ಕೌಟಿಲ್ಯನ ``ಅರ್ಥಶಾಸ್ತ್ರ~~ ಪ್ರತಿಯನ್ನು ಸಂಸ್ಥೆಯಲ್ಲಿ ನೋಡಿ, ಪುಳಕಿತಳಾದೆ.
ಸುಮಾರು 70 ಸಾವಿರಕ್ಕೂ ಹೆಚ್ಚು ಅಪರೂಪದ ತಾಳೆಯೋಲೆಗಳ ಹಸ್ತಪ್ರತಿಗಳು ಹಾಗೂ 40 ಸಾವಿರ ಪ್ರಾಚೀನ ಪುಸ್ತಕಗಳನ್ನು ಹೊಂದಿರುವ ಸಂಸ್ಥೆಯ ಗ್ರಂಥಾಲಯ ನವೀಕರಣಕ್ಕೆ ಅನುದಾನ ನೀಡುವ ಮೂಲಕ, ಬರೀ ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವದ ಪರಂಪರೆಗೆ ಸೇರಿದ ಜ್ಞಾನ ನಿಧಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ  ಮಹತ್ವದ ಹೆಜ್ಜೆಯನ್ನಿಟ್ಟ ಸಂತಸ ನನ್ನದಾಯಿತು. ಮನೋಜ್ಞ ವಾಸ್ತುಶಿಲ್ಪ ಹೊಂದಿರುವ ಮೈಸೂರು ಅರಮನೆಯನ್ನು ನೋಡುವ ಅವಕಾಶ ಲಭಿಸಿತು. ಆದರೆ, ನಮ್ಮ ಪ್ರವಾಸ ಅಲ್ಪಾವಧಿಯದಾಗಿತ್ತು.  ಮತ್ತೊಮ್ಮೆ ಮೈಸೂರಿಗೆ ಭೇಟಿ ನೀಡುವ ಅವಕಾಶಕ್ಕಾಗಿ ಕಾದಿದ್ದೇನೆ. 

ಮಾರ್ಚ್ ತಿಂಗಳ ಮೊದಲ ವಾರ ಬರುತ್ತಿದ್ದಂತೆ, ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ (ಮಾರ್ಚ್ 8)ಯ ಕಾರ್ಯಕ್ರಮಗಳನ್ನು ನೆನಪಿಸಲು ಬಯಸುತ್ತಿದ್ದೇನೆ.  ಇಡೀ ತಿಂಗಳ ಅವಧಿಯನ್ನು ಅಮೆರಿಕದ ವಿದೇಶಾಂಗ ಇಲಾಖೆ (ಸ್ಟೇಟ್ ಡಿಪಾರ್ಟ್‌ಮೆಂಟ್) ಮಹಿಳೆ ಇತಿಹಾಸ ಮಾಸವನ್ನಾಗಿ ಆಚರಿಸುತ್ತದೆ.
 
ಈ ಹಿನ್ನೆಲೆಯಲ್ಲಿ ನಾವು ತಿಂಗಳುದ್ದಕ್ಕೂ ವೈವಿಧ್ಯಮಯ ಚಟುವಟಿಕೆ ಹಾಗೂ ಕಾರ್ಯಕ್ರಮಗಳನ್ನು ಬೆಂಗಳೂರು ಹಾಗೂ ಚೆನ್ನೈನಲ್ಲಿ ಹಮ್ಮಿಕೊಂಡಿದ್ದೇವೆ. ಮಹಿಳಾ ಇತಿಹಾಸ ಮಾಸದ ನಮ್ಮ ಚಟುವಟಿಕೆಗಳನ್ನು ಅರಿಯಲು ನಮ್ಮ ಫೇಸ್ ಬುಕ್ ಪುಟಕ್ಕೆ http://www.facebook.com/chennai.usconsulate ಭೇಟಿ ನೀಡಿ.

ತಮ್ಮ ವಿಶ್ವಾಸಿ
ಜೆನಿಫೆರ್ ಮ್ಯಾಕ್‌ಇನ್ಟೈರ್
ಕಾನ್ಸಲ್ ಜನರಲ್, ಅಮೆರಿಕನ್ ದೂತಾವಾಸ, ಚೆನ್ನೈ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.