ADVERTISEMENT

jituವಿದ್ಯುತ್‌ ಇಲಾಖೆ ವಿರುದ್ಧ ಕಾಂಗ್ರೆಸ್‌ ಆರೋಪದ ಸುರಿಮಳೆಜನರ ಸಮಸ್ಯೆಗೆ ಸ್ಪಂದಿಸದ ಬೆಸ್ಕಾಂ

ಡಾ.ಆರ್.ಬಾಲ ಸುಬ್ರಹ್ಮಣ್ಯಂ
Published 28 ಜೂನ್ 2011, 12:20 IST
Last Updated 28 ಜೂನ್ 2011, 12:20 IST

ಪ್ರಜಾವಾಣಿ ವಾರ್ತೆ

ಕನಕಪುರ: ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ಬೆಸ್ಕಾಂ ಇಲಾಖೆ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಪುರಸಭೆ ಅಧ್ಯಕ್ಷ ಆರ್.ಕೃಷ್ಣಮೂರ್ತಿ ಆರೋಪಿಸಿದರು.

ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ವಿದ್ಯುತ್‌ ಸಮಸ್ಯೆ ಕುರಿತು ಚರ್ಚಿಸಲು ಕರೆಯಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಸಾರ್ವಜನಿಕರ ಕುಂದು ಕೊರತೆಗಳಿಗೆ ಸ್ಪಂದಿಸುವ ಬದಲು ಇಲಾಖೆಯ ಅಧಿಕಾರಿಗಳು ಜನರ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡು ಹಣ ಮಾಡಲು ಮುಂದಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನಲ್ಲಿ ಸುಮಾರು 100 ಟ್ರಾನ್ಸ್‌ ಫಾರ್ಮರ್ಗಳು(ಟಿ.ಸಿ) ಸುಟ್ಟುಹೋಗಿವೆ. ಹೆಚ್ಚುವರಿಯಾಗಿ 60 ಟಿ.ಸಿ.ಗಳ ಅಳವಡಿಸಬೇಕಿದೆ. ಆದರೆ ಇಲಾಖೆಯ ಅಧಿಕಾರಿಗಳು ಈವರೆಗೆ ಟಿ.ಸಿ.ಗಳ ದುರಸ್ತಿ ಬಗ್ಗೆಯಾಗಲಿ ಅಥವಾ ಅಗತ್ಯವಾದ ಹೆಚ್ಚುವರಿ ಟಿ.ಸಿ.ಗಳ ಕುರಿತಾಗಿ ಕ್ರಮ ಕೆ„ಗೊಂಡಿಲ್ಲ ಎಂದು ಆರೋಪಿಸಿದರು.

ಟಿ.ಸಿ. ಬದಲಾಯಿಸಿಕೊಡಲು 10 ಸಾವಿರ ಲಂಚ ಕೇಳುತ್ತಾರೆ. ಜೊತೆಗೆ ದುರಸ್ತಿಯಾಗಿರುವ ಟ್ರಾನ್ಸ್‌ ಫಾರ್ಮರ್ಗಳನ್ನು ರೆ„ತರೇ ರಿಪೇರಿ ಮಾಡುವ ಜಾಗಕ್ಕೆ ಕೊಂಡೊಯ್ಯಬೇಕಿದೆ. ಹಾಗೆ ಮಾಡಿದರೂ ಟಿ.ಸಿ. ರಿಪೇರಿಯಾಗಲು ತಿಂಗಳುಗಟ್ಟಲೆ ಕಾಯಬೇಕಿದೆ ಎಂದು ದೂರಿದರು.

ಪಟ್ಟಣದಲ್ಲಿ ವೋಲ್ಟೆàಜ್‌ ಕೊರತೆಯಿದ್ದು, ಎಂ.ಜಿ.ರಸ್ತೆಯಲ್ಲಿ ಅಳವಡಿಸಿರುವ ಜೋಡಿ ದೀಪಗಳು ಚಾಲು ಅಗದೇ ನಿರಪಯುಕ್ತವಾಗಿವೆ. ಅವುಗಳನ್ನು ಸರಿಪಡಿಸುವಂತೆ ಬೆಸ್ಕಾಂ ಅಧಿಕಾರಿ ಧಾತ್ರಿಯವರನ್ನು ಕೇಳಿದರೆ ಅದಕ್ಕೆ ಅವರು ಬೇಜಾಬ್ದಾರಿಯಿಂದ ಉತ್ತರ ನೀಡುತ್ತಾರೆ. ಕೆ„ಗಾರಿಕಾ ಪ್ರದೇಶಗಳಿಗೆ ಹೆಚ್ಚು ಒತ್ತುನೀಡುವ ಇಲಾಖೆ ಸಾರ್ವಜನಿಕರ ಕುಂದು–ಕೊರತೆಗಳಿಗೆ ಮಾತ್ರ ಸ್ಪಂದಿಸದೆ ನಿರ್ಲಕ್ಷ ತಾಳುತ್ತಿದೆ. ಕೂಡಲೆ ಇವರ ವಿರುದ್ದ ಶಿಸ್ತುಕ್ರಮ ಕೆ„ಗೊಳ್ಳಬೇಕೆಂದು ಅವರು ಒತ್ತಾಯಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಕನ್ಯ ರಂಗಸ್ವಾಮಿ, ಮಾಜಿ ಅಧ್ಯಕ್ಷ ಹೊಸಕೋಟೆ ಪುರುಷೋತ್ತಮ್‌ ಮಾತನಾಡಿ, ಬೆಸ್ಕಾಂ ಇಲಾಖೆಯವರು ಟಿ.ಸಿ. ದುರಸ್ತಿ ಮಾಡಿಕೊಡುವ ಹಾಗೂ ಹೆಚ್ಚುವರಿ ಟಿ.ಸಿ ಅಳವಡಿಸುವುದನ್ನು ~ವ್ಯವಹಾರ~ ಮಾಡಿಕೊಂಡಿದ್ದಾರೆ. ರೆ„ತರಿಂದ ಹಣಪಡೆದು ರಿಪೇರಿ ಮಾಡಿಕೊಡುವ ಟಿ.ಸಿ.ಗಳು ವರ್ಷದಲ್ಲೇ ರಿಪೇರಿಗೆ ಬರುತ್ತಿವೆ. ಕಳಪೆ ಗುಣಮಟ್ಟದ ಟ್ರಾನ್ಸ್‌ ಫಾರ್ಮರ್ಗಳನ್ನು ಇಲಾಖೆಯು ಪೂರೆ„ಕೆ ಮಾಡುತ್ತಿದೆ. ಮಾತ್ರವಲ್ಲ ಗುತ್ತಿಗೆದಾರರು ಸರ್ಕಾರ ಹಾಗೂ ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದಾರೆಂದು ಆರೋಪಿಸಿದರು.

ಆರ್.ಎಲ್‌.ಎಂ.ಎಸ್‌. ಸ್ಕೀಮ್‌ನಲ್ಲಿ ಅಳವಡಿಸಿರುವ ಟ್ರಾನ್ಸ್‌ಫಾರ್ಮರ್ಗಳು ಕೆಲವು ದುರಸ್ತಿಯಾಗಿವೆ. ಇನ್ನು ಕೆಲವುಗಳನ್ನು ಇಲಾಖೆಯವರ ಬಿಚ್ಚಿಮಾರಿಕೊಂಡಿದ್ದಾರೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಜಾರಿಗೆ ಬಂದ ಯೋಜನೆಯು ಸಂಪೂರ್ಣ ವಿಫಲವಾಗಿದೆ. ಆದಾಗ್ಯೂ ಮತ್ತೆ ~ನಿರಂತರ ಜ್ಯೋತಿ~ ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದು ಹೊಸಲೆ„ನ್‌ ಎಳೆದ್ದಾರೆ. ಈಗಾಗಲೇ ಕಾಮಗಾರಿ ಮುಗಿದಿದ್ದರೂ ಸಾರ್ವಜನಿಕರ ಬಳಕೆಗೆ ನೀಡಿಲ್ಲ. ರೆ„ತರ ಪಂಪ್‌ಸೆಟ್ಟುಗಳನ್ನು ಸಕ್ರಮ ಗೊಳಿಸಲು 15 ಸಾವಿರ ಹಣವನ್ನುಕಟ್ಟಿಸಿ ಕೊಳ್ಳಲಾಗಿದೆ. ಆದರೆ ಅದನ್ನು ಸಕ್ರಮಗೊಳಿಸಲು ನಿರ್ದಿಷ್ಟ ಕಾಲ ನಿಗದಿ ಮಾಡದೇ ಎಲ್ಲವನ್ನು ಗೊಂದಲ ಮಾಡಿದ್ದಾರೆಂದು ಕಿಡಿಕಾರಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ.ಎನ್‌.ದಿಲೀಪ್‌ಮಾತನಾಡಿ., ರಾಜ್ಯದಲ್ಲಿ ಸಮರ್ಪಕ ವಿದ್ಯುತ್‌ ಪೂರೆ„ಕೆ ಮಾಡುತ್ತಿರುವುದಾಗಿ ಇಂಧನ ಸಚಿವರು ಹೇಳುತ್ತಾರೆ. ಆದರೆ ತಾಲ್ಲೂಕಿನಲ್ಲಿ ಅಸಮರ್ಪಕ ವಿದ್ಯುತ್‌ ಪೂರೆ„ಕೆಯಾಗುತ್ತಿದ್ದು ಇಲಾಖೆಯು ಭ್ರಷ್ಟಾಚಾರದ ಕೂಪವಾಗಿದೆ. ಈ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳುವ ಚಿಂತನೆ ನಡೆಸಿದ್ದು ನಾಳೆ ಕಾರ್ಯಕ್ರಮಕ್ಕೆ ಇಂದನ ಸಚಿವೆ ಶೋಭಕರಂದಾ‰ಜೆಯವರು ಆಗಮಿಸುವುದರಿಂದ ಮೊದಲು ಮನವಿ ಪತ್ರ ಸಲ್ಲಿಸಲಾಗುವುದು. ಜುಲೈ 1ರ ವರೆಗೆ ಕಾಲಾವಕಾಶವನ್ನು ನೀಡುತ್ತೇವೆ. ಒಂದು ವೇಳೆ ಗಡುವಿನೊಳಗೆ ಸರಿಪಡಿಸದಿದ್ದರೆ ಬೆಸ್ಕಾಂ ಕಚೇರಿಗೆ ಬೀಗ ಹಾಕಿ ಉಗ್ರ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು. ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ವಿ.ಶ್ರೀàನಿವಾಸ್‌, ಕಾನೂನು ಘಟಕದ ಅಧ್ಯಕ್ಷ ಗೋವಿಂದರಾಜು, ಪ್ರಧಾನ ಕಾರ್ಯದರ್ಶಿ ರವಿ, ಕಾರ್ಯದರ್ಶಿ ಜಗದೀಶ್‌, ಮುಖಂಡ ರಂಗಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.