ADVERTISEMENT

ಅಮೀರ್ ಖಾನ್ ‘ಮಹಾಭಾರತ’ ಚಿತ್ರಕ್ಕೆ ಮುಕೇಶ್ ಅಂಬಾನಿ ಹೂಡಿಕೆ?

ಏಜೆನ್ಸೀಸ್
Published 16 ಜೂನ್ 2018, 9:09 IST
Last Updated 16 ಜೂನ್ 2018, 9:09 IST
ಅಮೀರ್ ಖಾನ್ (ಸಂಗ್ರಹ ಚಿತ್ರ)
ಅಮೀರ್ ಖಾನ್ (ಸಂಗ್ರಹ ಚಿತ್ರ)   

ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ನಿರ್ಮಿಸಲು ಉದ್ದೇಶಿಸಿರುವ ‘ಮಹಾಭಾರತ’ ಚಿತ್ರಕ್ಕೆ ಉದ್ಯಮಿ ಮುಕೇಶ್ ಅಂಬಾನಿ ಹೂಡಿಕೆ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಸಾವಿರ ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ‘ಮಹಾಭಾರತ’ ಚಿತ್ರ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇದನ್ನು ಅಮೀರ್‌ ಅಥವಾ ಚಿತ್ರತಂಡದ ಯಾರೊಬ್ಬರೂ ಸ್ಪಷ್ಟಪಡಿಸಿಲ್ಲ. ಒಂದು ವೇಳೆ ಇದು ನಿಜವಾದರೆ ಇಷ್ಟು ದೊಡ್ಡ ಮೊತ್ತದಲ್ಲಿ ಭಾರತೀಯ ಚಿತ್ರರಂಗದಲ್ಲಿ ತಯಾರಾಗುತ್ತಿರುವ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ‘ಮಹಾಭಾರತ’ ಪಾತ್ರವಾಗಲಿದೆ.

ಮುಕೇಶ್ ಅವರು ಹೂಡಿಕೆ ಮಾಡುವ ಸಾಧ್ಯತೆ ಇರುವುದರಿಂದ ಸದ್ಯದಲ್ಲೇ ಈ ಚಿತ್ರದ ಕೆಲಸಗಳು ಆರಂಭವಾಗಬಹುದು ಎಂದು ನಿರೀಕ್ಷಿಸಲಾಗಿದೆ.

ADVERTISEMENT

ಉದ್ಯಮಿ ಮುಕೇಶ್‌ ಅಂಬಾನಿ ಅವರು ಚಿತ್ರಕ್ಕೆ ಹಣ ಹೂಡಲಿದ್ದಾರೆ. ತಾವು ಆರಂಭಿಸಿರುವ ಹೊಸ ಕಂಪೆನಿ ಮೂಲಕ ಮುಕೇಶ್‌ ಹಣ ಹೂಡಡಲಿದ್ದು, ಕಂಪೆನಿಯ ಮೊದಲ ಯೋಜನೆ ಈ ಸಿನಿಮಾವೇ ಆಗಲಿದೆ. ಭವಿಷ್ಯದಲ್ಲಿ ಈ ಕಂಪೆನಿ ಮೂಲಕ ಮತ್ತಷ್ಟು ಚಿತ್ರಕ್ಕೆ ಮುಕೇಶ್‌ ಬಂಡವಾಳ ಹೂಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.